ಜಿಲ್ಲೆ

ಭೂ ಸುರಕ್ಷಾ ಯೋಜನೆಯಡಿ ಭೂ ದಾಖಲೆಗಳ ಗಣಕೀಕರಣ, ಅಕ್ರಮ ದಂಧೆಗೆ ಕಡಿವಾಣ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ರೈತರಿಗೆ ಸುಭದ್ರತೆಯ ಡಿಜಿಟಲ್ ದಾಖಲೆಗಳೊಂದಿಗೆ ಒದಗಿಸುತ್ತಿರುವ ಜಮೀನಿನ ಮಾಲೀಕತ್ವದ ಗ್ಯಾರಂಟಿಯಿಂದ ಅಕ್ರಮ ವ್ಯವಹಾರಗಳು, ಜಮೀನು ನಕಲಿ ಪತ್ರಗಳ ಸೃಷ್ಟಿಯ ದಂಧೆಗೆ ಕಡಿವಾಣ ಬೀಳಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಗುಡಿಬಂಡೆ ಪಟ್ಟಣದಲ್ಲಿ ಜಿಲ್ಲಾಡಳಿತ, ಕಂದಾಯ ಇಲಾಖೆಯು ಬುಧವಾರ ಕೈಗೊಂಡಿದ್ದ ಭೂ ಸುರಕ್ಷಾ ಯೋಜನೆಯಡಿ ಭೂ ದಾಖಲೆಗಳ ಗಣಕೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಚೇರಿಯಲ್ಲಿನ 50 ವರ್ಷಗಳ ಹಿಂದಿನ ಬಹುತೇಕ ಭೂ ದಾಖಲೆಗಳು ಮುಟ್ಟಿದರೆ ಪುಡಿಪುಡಿಯಾಗುತ್ತವೆ. ಹಲವು ನಾಪತ್ತೆಯಾಗಿ ಈಗ ಸಿಗುತ್ತಿಲ್ಲ. ಇಂತಹ ಸಮಸ್ಯೆಗಳು ಭವಿಷ್ಯದಲ್ಲಿ ಉದ್ಭವಿಸದಿರಲು ಕ್ರಾಂತಿಕಾರಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ ಸುಧಾಕರ್, ಶಾಸಕ ಎಸ್.ಎನ್ ಸುಬ್ಬಾರೆಡ್ಡಿ, ಕಂದಾಯ ಇಲಾಖೆಯ ಆಯುಕ್ತ ಸುನಿಲ್ ಕುಮಾರ್, ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿ.ಪಂ.ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ ಮತ್ತಿತರರು ಇದ್ದರು.

*ಭೂ ಸುರಕ್ಷತಾ ಯೋಜನೆ

ರಾಜ್ಯದಲ್ಲಿರುವ ತಾಲೂಕು ಕಚೇರಿ, ಭೂಮಾಪನ ಇಲಾಖೆ ಹಾಗೂ ನೋಂದಣಿ ಕಚೇರಿಯ ಎ ಮತ್ತು ಬಿ ವರ್ಗದ ಕಡತ ಸೇರಿದಂತೆ ಎಲ್ಲ ಭೂ ದಾಖಲೆಗಳನ್ನು ಗಣಕೀಕರಣಗೊಳಿಸುವ, ಪಾರದರ್ಶಕತೆಯನ್ನು ಕಾಪಾಡುವ ರಾಜ್ಯ ಸರ್ಕಾರದ ಭೂಸುರಕ್ಷಾ ಯೋಜನೆಗೆ ಸಚಿವರು ಚಾಲನೆ ನೀಡಿದರು.

ಕಳೆದ ಮಾರ್ಚ್ 2024 ರಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿನ 1 ತಾಲೂಕಿನಂತೆ 31 ಕಡೆ ಪ್ರಾಯೋಗಿಕವಾಗಿ ಅನುಷ್ಠಾನಗೊಂಡಿತ್ತು. ಅದರಂತೆ 14.87 ಲಕ್ಷ ಕಡತಗಳ 7.95 ಕೋಟಿ ಪುಟಗಳನ್ನು ಸ್ಕಾ$ನ್ ಮಾಡಲಾಗಿದೆ. ಉಳಿದ 209 ತಾಲೂಕುಗಳಲ್ಲಿ 150 ಕೋಟಿ ಪುಟಗಳ ದಾಖಲೆಗಳನ್ನು ಸ್ಕಾ$ನ್ ಮಾಡುವ ಗುರಿ ಹೊಂದಲಾಗಿದೆ. ಯೋಜನೆಯ ವೆಚ್ಚ ಅಂದಾಜು 150 ಕೋಟಿ ರೂ. ಇದರಡಿ 150 ವರ್ಷಗಳ ಎಲ್ಲ ದಾಖಲೆಗಳನ್ನು ಗಣಕೀಕರಣ ಮಾಡಿ, ಶಾಶ್ವತವಾಗಿ ಭದ್ರಪಡಿಸಲಾಗುತ್ತದೆ. ಹಾಗೆಯೇ ಆ್ ಲೈನ್ ಇಲ್ಲವೇ ಆನ್ ಲೈನ್ ನಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ದೃಢೀಕರಣ ಸಹಿಯೊಂದಿಗೆ ಒದಗಿಸಲಾಗುತ್ತದೆ. ಇದರಿಂದ ಅನವಶ್ಯಕವಾಗಿ ಕಚೇರಿಗೆ ಅಲೆದಾಟ, ನಕಲಿ ದಾಖಲೆಗಳ ಸೃಷ್ಟಿಯ ಅಕ್ರಮ ಅವ್ಯವಹಾರ ತಪು$್ಪತ್ತದೆ.