ವರದಾಪುರದಲ್ಲಿ ಆಯೋಜಿಸಿದ್ದ ಉಚಿತ ಕಂಪ್ಯೂಟರ್ ತರಬೇತಿ ಶಿಬಿರವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಲಾಯಿತು. ಎಸ್‌ಎಲ್‌ಆರ್ ಮೆಟಾಲಿಕ್ಸ್‌ನ ಸಿಬ್ಬಂದಿ ಮಾರುತಿ, ಮುರಳಿ, ಗ್ರಾಮಸ್ಥರಾದ ವೆಂಕಟೇಶ, ಟ್ರಸ್ಟ್ ಅಧ್ಯಕ್ಷ ಭೀಮರಾಜ ಇತರರಿದ್ದರು. 
ಜಿಲ್ಲೆ

ಕಂಪ್ಯೂಟರ್ ತರಬೇತಿ ಪ್ರಯೋಜನೆ ಪಡೆಯಿರಿ

ರುದ್ರಪ್ಪ ವಾಲಿ

ಹಗರಿಬೊಮ್ಮನಹಳ್ಳಿ: ಪ್ರತಿಯೊಬ್ಬರಿಗೂ ಕಂಪ್ಯೂಟರ್ ಜ್ಞಾನ ಅತ್ಯಂತ ಅವಶ್ಯವಾಗಿದೆ ಎಂದು ಎಸ್‌ಎಲ್‌ಆರ್ ಮೆಟಾಲಿಕ್ಸ್ ಐಟಿ ವಿಭಾಗದ ಮುಖ್ಯಸ್ಥ ದತ್ತಾತ್ರೇಯ ಅಭಿಪ್ರಾಯಪಟ್ಟರು.

ವರದಾಪುರ ಗ್ರಾಮದಲ್ಲಿ ಎಸ್‌ಎಲ್‌ಆರ್ ಮೆಟಾಲಿಕ್ಸ್ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜುಕೇಷನಲ್ ಟ್ರಸ್ಟ್ ಆಯೋಜಿಸಿದ್ದ ಉಚಿತ ಕಂಪ್ಯೂಟರ್ ತರಬೇತಿ ಶಿಬಿರ ಬುಧವಾರ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಯುವಜನತೆಗೆ ಕಂಪ್ಯೂಟರ್ ಜ್ಞಾನ ಅವಶ್ಯಕವಾಗಿದೆ. ಆದ್ದರಿಂದ ಶಿಬಿರವನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಮುಖಂಡ ಹುಸೇನ್ ಪೀರಾ ಮಾತನಾಡಿ, ಗ್ರಾಮದ ಯುವಕ-ಯುವತಿಯರು ಕಂಪ್ಯೂಟರ್ ಶಿಕ್ಷಣಕ್ಕಾಗಿ ಪಟ್ಟಣ ನಗರ ಪ್ರದೇಶಗಳನ್ನು ಅವಲಂಬಿಸಬೇಕಾಗಿದೆ. ಈಗ ಎಸ್‌ಎಲ್‌ಆರ್ ಕಂಪನಿಯಿಂದ ಆಯೋಜಿಸಿರುವ ಉಚಿತ ಶಿಬಿರ ಕಂಪ್ಯೂಟರ್ ಕಲಿಕೆಗೆ ಅನುಕೂಲವಾಗಲಿದೆ ಎಂದರು.