ರಾಜಶೇಖರ ಹೆಬ್ಬಾರ್ ಸೇವಾ ರೂಪದಲ್ಲಿ ನೀಡಿದ ಗಣಕಯಂತ್ರವನ್ನು ಮಹಾರಾಜ ಸ್ವಾಮಿ ಶ್ರೀ ವರಾಹ ದೇವಾಲಯದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಸತೀಶ್ ಎಂ.ನಾಯಕ್ ಉದ್ಘಾಟಿಸಿದರು.  
ಜಿಲ್ಲೆ

ವರಾಹ ದೇಗುಲದಲ್ಲಿ ಗಣಕಯಂತ್ರ ಉದ್ಘಾಟನೆ

ಇಂದಿರಾ ಎನ್ ಕೆ

ಗಂಗೊಳ್ಳಿ: ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಭಕ್ತರ ಮಾಹಿತಿ ಸಂಗ್ರಹಕ್ಕಾಗಿ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜಶೇಖರ ಹೆಬ್ಬಾರ್ ಸೇವಾ ರೂಪದಲ್ಲಿ ನೀಡಿದ ಕಂಪ್ಯೂಟರನ್ನು ಮಹಾರಾಜಸ್ವಾಮಿ ಶ್ರೀ ವರಾಹ ದೇವಾಲಯ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಸತೀಶ್ ಎಂ.ನಾಯಕ್ ಸೋಮವಾರ ಉದ್ಘಾಟಿಸಿದರು.

ಸಮಿತಿ ಕಾರ್ಯದರ್ಶಿ ರವಿ ಮಡಿವಾಳ, ಸಮಿತಿ ಸದಸ್ಯರಾದ ನರಸಿಂಹ ಪೂಜಾರಿ, ನಾರಾಯಣ ಕೆ.ಗುಜ್ಜಾಡಿ, ನಾಗರಾಜ ಪಟಗಾರ, ದೇವಾಲಯ ಪ್ರತಿನಿಧಿ ನಾಗೇಶ್, ಕಚೇರಿ ಕಾರ್ಯದರ್ಶಿ ಮಂಜುನಾಥ್ ಮಧ್ಯಸ್ಥ ಉಪಸ್ಥಿತರಿದ್ದರು.