ಜಿಲ್ಲೆ

ಹಣ ದುರ್ಬಳಕೆ ಅಡುಗೆ ಸಹಾಯಕನಿಗೆ ಕಡ್ಡಾಯ ನಿವೃತ್ತಿ

ಗಂಗಾಧರ ಬಿ ವಿ

> ಆರೋಪಿತರಿಂದ ಹಣ ವಸೂಲಿಗೆ ಹಿಂದುಳಿದ ವರ್ಗಗಳ ಇಲಾಖೆ ಆಯುಕ್ತರ ಆದೇಶ

ರಾಮನಗರ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಹಣ ದುರುಪಯೋಗ ಪ್ರಕರಣದಲ್ಲಿ ಅಡುಗೆ ಸಹಾಯಕರೊಬ್ಬರನ್ನು ಕಡ್ಡಾಯ ನಿವೃತ್ತಿಗೊಳಿಸಿ, ದುರುಪಯೋಗ ಮೊತ್ತವನ್ನು ಇಲಾಖೆಯಲ್ಲಿ ಕರ್ತವ್ಯನಿರ್ವಹಿಸಿದ್ದ ವಿಸ್ತರಣಾಧಿಕಾರಿಗಳಿಂದ ವಸೂಲಿ ಮಾಡಲು ಆದೇಶಿಸಿರುವ ಇಲಾಖೆ ಆಯುಕ್ತರು, ಓರ್ವ ಅಧಿಕಾರಿಯನ್ನು ಆರೋಪದಿಂದ ಮುಕ್ತಗೊಳಿಸಿದ್ದಾರೆ.

ರಾಮನಗರ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಖಜಾನೆ&2ರ ಡಿಎಸ್​ಸಿ ಕೀಗಳನ್ನು ದುರ್ಬಳಕೆ ಮಾಡಿಕೊಂಡು ಒಟ್ಟು 78.11 ಲಕ್ಷ ರೂ. ಸರ್ಕಾರಿ ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪ ಕೇಳಿ ಬಂದಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ಅಂದು ತನಿಖೆ ಮಾಡಿದ್ದ ಇಲಾಖೆಯ ಜಿಲ್ಲಾ ಅಧಿಕಾರಿ, ಅಡುಗೆ ಸಿಬ್ಬಂದಿಯನ್ನು ತಾಲೂಕು ಕಚೇರಿಗೆ ಅನಧಿಕೃತವಾಗಿ ನೇಮಕ ಮಾಡಿಕೊಂಡಿರುವುದು ಹಾಗೂ ಕಚೇರಿ ಬೀಗ ಮತ್ತು ಖಜಾನೆ&2ರ ಡಿಎಸ್​ಸಿ ಕೀಗಳನ್ನು ಬೇಜವಾಬ್ದಾರಿಯಿಂದ ನೀಡಿರುವುದರ ಜತೆಗೆ ಖಜಾನೆಯಿಂದ ಹೆಚ್ಚಿನ ಹಣವನ್ನು ಸೆಳೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ವರದಿ ನೀಡಿದ್ದರು.

ಈ ವರದಿ ಹಿನ್ನೆಲೆಯಲ್ಲಿ ಇಲಾಖೆಯ ತಾಲೂಕು ಕಚೇರಿಯಲ್ಲಿ ನಿಯೋಜನೆ ಮೇಲೆ ಕೆಲಸ ಮಾಡುತ್ತಿದ್ದ ಡಿ ಗ್ರೂಪ್​ ನೌಕರ ಮಂಜುನಾಥ್​ ಎನ್​., ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ರವಿಕುಮಾರ್​ ಎಂ., ಸಿದ್ದರಾಜು ಎಸ್​., ಅವರನ್ನು ಅಮಾನತುಗೊಳಿಸಿ, 2022ರ ಡಿ.14ರಂದು ಇಲಾಖೆಯ ಆಯುಕ್ತರಾದ ದಯಾನಂದ್​ ಅವರು ಆದೇಶಿಸಿದ್ದರು.

ಆದೇಶದಲ್ಲಿ ಏನಿದೆ?

ಈ ಸಂಬಂಧ ನಿವೃತ್ತ ನ್ಯಾಯಾಧೀಶ ಲಿಯಾಖತ್​ ಅಲಿಖಾನ್​ ಅವರನ್ನು ವಿಚಾರಣಾಧಿಕಾರಿಯನ್ನಾಗಿ ಮತ್ತು ರಾಮನಗರ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಇವರನ್ನು ಮಂಡನಾಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿತ್ತು. ಸುಮಾರು ಎರಡು ವರ್ಷಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿ, ಹಣ ದುರುಪಯೋಗ ಆಗಿರುವುದನ್ನು ಸಮಿತಿ ಪತ್ತೆ ಹಚ್ಚಿತ್ತು. ನಂತರ ಎಲ್ಲ ಆರೋಪಿತ ಅಧಿಕಾರಿಗಳಿಂದ ಸಮಾಜಾಯಿಷಿಯನ್ನು ಪಡೆದುಕೊಂಡು ಪರಿಶೀಲನೆ ಮಾಡಲಾಗಿ ಕರ್ತವ್ಯ ರ್ನಿಲಕ್ಷ, ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿರುವುದು ದೃಢಪಟ್ಟಿತ್ತು.

ಈ ವರದಿ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯ 2018-19ನೇ ಸಾಲಿನಿಂದ 2022ರ ಡಿ.13ರವರೆಗೆ ಬಟವಾಡೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದ, ಪ್ರಸ್ತುತ ನಿವೃತ್ತರಾಗಿರುವ ಡಿ.ಹುಚ್ಚಯ್ಯ, ಬಿ.ಪಿ.ಬೈರೇಗೌಡ, ಹಾಲಿ ಮಂಡ್ಯದಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುಳಾ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿದ್ದರಾಜು ಎಸ್​., ಹಿಂದೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಕೆ.ಸತೀಶ್​ ಇವರಿಂದ ಹಣವನ್ನು ವಸೂಲಿ ಮಾಡಲು ಇಲಾಖೆ ಆಯುಕ್ತರು ಆದೇಶ ಮಾಡಿದ್ದಾರೆ. ಹಾಗೆಯೇ ಖಾಜನೆ-2ರ ಡಿಎಸ್​ಸಿ ಕೀಗಳನ್ನು ದುರ್ಬಳಸಿಕೊಂಡು ಸರ್ಕಾರಿ ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಪ್ರಮುಖ ಆರೋಪಿ ಅಡುಗೆ ಸಹಾಯಕ ಮಂಜುನಾಥ್​ ಇವರ ಮೇಲಿನ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ ಇವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಿ ಆದೇಶಿಸಲಾಗಿದೆ.

ಅಲ್ಲದೆ ಮತ್ತೊಬ್ಬ ಆರೋಪಿಯಾಗಿದ್ದ ರವಿಕುಮಾರ್​ ಆರೋಪಗಳು ಸಾಬೀತಾಗದ ಹಿನ್ನೆಲೆಯಲ್ಲಿ ಹಣ ದುರುಪಯೋಗ ಅವಧಿಯಲ್ಲಿ ಇವರು ಬಡವಾಡೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಪ್ರಕರಣದಿಂದ ಖುಲಾಸೆಗೊಳಿಸಲಾಗಿದ್ದು, ಅಮಾನತ್ತುಗೊಂಡ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸುವಂತೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಯಾರಿಂದ ಎಷ್ಟು ವಸೂಲಿ ? ಅಧಿಕಾರಿ ಹೆಸರು ಮೊತ್ತಡಿ.ಹುಚ್ಚಯ್ಯ (ನಿ) 4,01,310 ರೂ.ಎಸ್​.ಕೆ.ಮಂಜುಳಾ 4,55,080 ರೂ.ಕೆ.ಸತೀಶ್​ 13,02,680 ರೂ.ಬಿ.ಪಿ.ಬೈರೇಗೌಡ (ನಿ) 27,40,818 ರೂ.ಸಿದ್ದರಾಜು ಎಸ್​. 29,11,555 ರೂ.ಒಟ್ಟು 78,11,443 ರೂ.