ರಾಯಚೂರು: ರಾಜ್ಯದಲ್ಲಿ ವ್ಯಾಪಾರಿ ಕೇಂದ್ರ ಸೇರಿದಂತೆ ಎಲ್ಲಡೆ ಕನ್ನಡದಲ್ಲಿ ನಾಮಫಲಕ ಅಳವಡಿಸುವಂತೆ ಒತ್ತಾಯಿಸಿ ನಗರದ ಪ್ರಮುಖ ಬೀದಿಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮಂಗಳವಾರ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು.
ಸ್ಥಳೀಯ ಅಂಬೇಡ್ಕರ್ ವೃತ್ತದಿಂದ ಕೇಂದ್ರ ಬಸ್ ನಿಲ್ದಾಣ, ನಗರಸಭೆ ಕಚೇರಿ, ಟಿಪ್ಪು ಸುಲ್ತಾನ್ ರಸ್ತೆ ಮಾರ್ಗವಾಗಿ ಜಿಲ್ಲಾಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕದ ಪ್ರಕಾರ ಎಲ್ಲ ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡದ ನಾಮಫಲಕದಲ್ಲಿ ಶೇ.60ರಷ್ಟು ಭಾಗ ಕನ್ನಡ ಇರಬೇಕು. ಜತೆಗೆ ಕನ್ನಡವೇ ಮೊದಲ ಸ್ಥಾನದಲ್ಲಿ ಇರಬೇಕು.
ಜಾಹೀರಾತು ಫಲಕಗಳು ಕೂಡಾ ಕನ್ನಡದಲ್ಲಿರಬೇಕು. ಇದನ್ನು ಎಲ್ಲ ಉದ್ಯಮಿಗಳು ಪಾಲಿಸುವುದು ಕಡ್ಡಾಯವಾಗಿದ್ದರೂ ಸಮರ್ಪಕವಾಗಿ ಜಾರಿಗೊಂಡಿಲ್ಲ. ಕೂಡಲೇ ಸರ್ಕಾರ ಜಾರಿಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.
ನಾವು ಯಾವ ಭಾಷೆಯ ವಿರೋಗಳಲ್ಲ. ಆದರೆ ಕನ್ನಡಿಗರಿಗೆ ಅಪಮಾನ ಆಗುವುದಿಲ್ಲ ಸಹಿಸುವುದಿಲ್ಲ. ಕನ್ನಡದಲ್ಲಿ ನಾಮಫಲಕ ಹಾಕದವರು ಕನ್ನಡ ದ್ರೋಹಿಗಳು, ನಾಡದ್ರೋಹಿಗಳು. ಅಂತವರ ವಿರುದ್ಧ ನಮ್ಮ ಹೋರಾಟವಾಗಿದೆ. ಸರ್ಕಾರದ ನಿಯಮಾವಳಿಯಂತೆ ನಾಮಫಲಕಗಳು ಕನ್ನಡೀಕರಣಗೊಳ್ಳದಿದ್ದಲ್ಲ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ವಿನೋದರೆಡ್ಡಿ, ಪದಾಕಾರಿಗಳಾದ ಡಿ.ಬಸನಗೌಡ, ಜಿಲಾನಿ ಪಾಷಾ, ಗಂಗಣ್ಣ, ವೆಂಕಟೇಶ, ಹೊನ್ನಪ್ಪ ಗೂಳಪ್ಪನವರ, ಅರುಣ ಉಪಾಸಿ, ಫಿರೋಜ್, ಸಾದಿಕ್, ಶಹನವಾಜ್, ನಾಗಪ್ಪ, ಚಂದ್ರು, ಕೆ.ಎಂ.ಬಾಷಾ, ಶರಣಪ್ಪ ಪಾಲ್ಗೊಂಡಿದ್ದರು.