ಕಮತಗಿ ಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಯಿತು. ಮುಖ್ಯಾಧಿಕಾರಿ ಎಫ್. ಎನ್. ಹುಲ್ಲಿಕೇರಿ, ಕಿರಿಯ ಅಭಿಯಂತರ ಎನ್. ಎಂ. ಖಾಜಿ, ಸಮುದಾಯ ಸಂಘಟನಾ ಅಧಿಕಾರಿ ರಮೇಶ ಪದಕಿ ಇತರರಿದ್ದರು. 
ಜಿಲ್ಲೆ

ಪಟ್ಟಣದಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಒತ್ತಾಯ

ಗಿರೀಶ ಸಗರ

ಕಮತಗಿ : ಪಟ್ಟಣದಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಪಟ್ಟಣ ಪಂಚಾಯಿತಿ ಸದಸ್ಯರು ಒತ್ತಾಯಿಸಿದರು.

ಸ್ಥಳೀಯ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಗುರುವಾರ 2024-25ನೇ ಸಾಲಿನ ಆಯವ್ಯಯ ತಯಾರಿಸುವ ಕುರಿತು ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಬಹುತೇಕ ಸದಸ್ಯರು ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಲು, ಸಮರ್ಪಕ ಶೌಚಗೃಹ ನಿರ್ಮಿಸಲು ಆಗ್ರಹಿಸಿರು.

ಪಪಂ ವ್ಯಾಪ್ತಿಯಲ್ಲಿ ನೂತನ ಲೇಔಟ್‌ಗಳನ್ನು ಮಾಡಲಾಗಿದ್ದು, ಅಲ್ಲಿ ಉದ್ಯಾನ ಅಭಿವೃದ್ಧಿ ಮಾಡಬೇಕು. ಗಟಾರ್‌ಗಳನ್ನು ದುರಸ್ತಿಗೊಳಿಸಬೇಕು. ಪಟ್ಟಣದಲ್ಲಿ ಈಗಾಗಲೇ ಎರಡು ನೀರಿನ ಘಟಕಗಳಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಘಟಕ ಸ್ಥಾಪಿಸಬೇಕೆಂದು ಸದಸ್ಯರು ಒತ್ತಾಯಿಸಿದರು.

ಮುಖ್ಯಾಧಿಕಾರಿ ಎಫ್. ಎನ್. ಹುಲ್ಲಿಕೇರಿ, ಕಿರಿಯ ಅಭಿಯಂತರ ಎನ್. ಎಂ. ಖಾಜಿ, ಸಮುದಾಯ ಸಂಘಟನಾ ಅಧಿಕಾರಿ ರಮೇಶ ಪದಕಿ, ಸದಸ್ಯರಾದ ರಮೇಶ ಜಮಖಂಡಿ, ದೇವಿಪ್ರಸಾದ ನಿಂಬಲಗುಂದಿ, ಬಸವರಾಜ ಕುಂಬಳಾವತಿ, ಪ್ರಕಾಶ ಸಿನ್ನೂರು, ಸಂಗಪ್ಪ ಗಾಣಿಗೇರ, ಹುಚ್ಚೇಶ ಮಾದ್ಲಿ, ಲಕ್ಷ್ಮಣ ಮಾದರ, ಗುರುಲಿಂಗಪ್ಪ ಪಾಟೀಲ, ಚಂದಪ್ಪ ಕುರಿ,ಪ್ರಭು ಹೂಲಮನಿಗೌಡರ, ಶ್ವೇತಾ ಚಲವಾದಿ, ತಿಮ್ಮಣ್ಣ ಹಗೇದಾಳ, ನಾಗಪ್ಪ ಬಾಗೇವಾಡಿ, ಲಕ್ಷ್ಮಣ ದ್ಯಾಮಣ್ಣವರ, ರಮೇಶ ಲಮಾಣಿ, ರತ್ನಾ ಗಾಣಿಗೇರ, ಮಹಾಂತೇಶ ಬಿಸನಾಳ ಇತರರಿದ್ದರು.