ಜಿಲ್ಲೆ

ವಂಚನೆ ತಡೆಗಟ್ಟುವಂತೆ ಒತ್ತಾಯ

ಬೆಳಗಾವಿ: ಗೋಕಾಕ ತಾಲೂಕಿನ ಅನಕ್ಷರಸ್ಥ ಮಹಿಳೆಯರ ಹೆಸರಿನ ಮೇಲೆ ಫೈನಾನ್ಸ್‌ನವರು ಮೋಸ ಮಾಡಿದ್ದು, ಕಿರುಕುಳ ನೀಡುತ್ತಿದ್ದಾರೆ. ಇಂತಹ ಫೈನಾನ್ಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಜಿಲ್ಲಾಧಿಕಾರಿ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು. ಗೋಕಾಕ ತಾಲೂಕಿನಲ್ಲಿ ಅನಕ್ಷರಸ್ಥರ ಹೆಸರಿನಲ್ಲಿ ಫೈನಾನ್ಸ್‌ಗಳಲ್ಲಿ ಸಾಲ ಪಡೆದು ವಂಚಿಸಲಾಗುತ್ತಿದೆ. ಬಳಿಕ ಫೈನಾನ್ಸ್‌ನವರು ಬಂದು ಮನೆ ಜಪ್ತಿ ಮಾಡಲು ಮುಂದಾಗುತ್ತಿದ್ದು, ದೌರ್ಜನ್ಯ ಎಸಗುತ್ತಿದ್ದಾರೆ. ಏಜೆಂಟ್‌ಗಳ ಮೂಲಕ ಈ ರೀತಿ ಮೋಸ ಮಾಡುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅನಿಲ ಶಿಂಗೆ, ವಿ.ಬಿ. ಬಂಬರಗಿ, ಅಡಿವೆಪ್ಪ ಕಮತಗಿ, ಸಣ್ಣಪ್ಪ ಸನದಿ, ಭಾರತಿ ಪಾಟೀಲ ಇತರರಿದ್ದರು.