ಮೈಸೂರು: ಈ ಬಾರಿಯ ದಸರಾ ಉತ್ಸವದಲ್ಲಿ ದುಂದುವೆಚ್ಚ ಮಾಡದೆ ಸರಳವಾಗಿ ದಸರಾ ಆಚರಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘದ ಗೌರವಾಧ್ಯಕ್ಷ ಮಹೇಶ್ ಸೋಸ್ಲೆ ಹೇಳಿದರು.
ಜನರು ಕೋವಿಡ್ ನೀಡಿದ ಹೊಡೆತದಿಂದ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಧಾರಾಕಾರ ಮಳೆಯಿಂದ ಜನರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅದ್ಧೂರಿಯ ದಸರಾ ಆಚರಿಸುವ ಅವಶ್ಯಕತೆ ಏನಿದೆ? ಯುವ ಸಂಭ್ರಮ, ಯುವ ದಸರಾ ಹೆಸರಿನಲ್ಲಿ ಹತ್ತಾರು ಕೋಟಿ ರೂ.ಗಳನ್ನು ದುಂದುವೆಚ್ಚ ಮಾಡಲಾಗುತ್ತಿದೆ. ಈ ಹಣವನ್ನು ಯುವಜನರ ಬದುಕು ರೂಪಿಸುವ ಕಾರ್ಯಕ್ರಮಗಳಿಗೆ ವಿನಿಯೋಗಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ನಟರಾಜ್ ಶಿವಣ್ಣ, ಮಣಿಕಂಠಸ್ವಾಮಿ, ಕುಮಾರ್ ಹುಲ್ಲಹಳ್ಳಿ, ಟಿ.ಎಂ. ಕಾರ್ತಿಕ್, ಪ್ರದೀಪ್ ಮುಮ್ಮಡಿ ಇದ್ದರು.