ರೋಣ: ಆರು ತಿಂಗಳಿಂದ ಕಾರ್ಮಿಕರ ವೇತನ ಪಾವತಿಸದೆ ಜೀವನ ನಡೆಸುವುದು ಕಷ್ಟಕವಾಗಿದೆ. ಆದಷ್ಟು ಬೇಗ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು. ಅಲ್ಲಿವರೆಗೂ ಕೆಲಸ ಮಾಡುವುದಿಲ್ಲ ಎಂದು ಕಾರ್ಮಿಕರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಆರ್. ಮಹಾದೇವಪ್ಪ ಅವರಿಗೆ ಮನವಿ ಸಲ್ಲಿಸಿದರು. ಕೆ.ಎಂ. ಹಿರೇಮಠ, ಎಲ್.ಎಸ್. ಕುರಹಟ್ಟಿ, ಎಸ್.ಎನ್. ಕಮ್ಮಾರ, ಜಿ.ಬಿ.ಅವಾರಿ, ಎಸ್.ಜಿ. ಬೂದಿಹಾಳ, ವಿ.ಎಸ್. ಕಳಾಕಪುರ, ಅನಿಲ ದೇಸಾಯಿ, ಮಂಜು ಮಾಳೆಕೊಪ್ಪ, ಧರ್ಮಪ್ಪ ಬೂದಿಹಾಳ, ಶಿವರಾಜ ಜಾಲಾಪುರ, ಸಿ.ಎಸ್. ಮಡಿವಾಳರ, ಆರ್.ಕೆ. ಪಾಟೀಲ, ಶಂಕ್ರಪ್ಪ ಗಡಾದ ಇತರರಿದ್ದರು.