ಜಿಲ್ಲೆ

ರೈಲು ಮಾರ್ಗ ನಿರ್ಮಾಣಕ್ಕೆ ಒತ್ತಾಯ

ಸೋಮಲಿಂಗ ತಳವಾರ

ರಾಮದುರ್ಗ: ಲೋಕಾಪುರದಿಂದ ರಾಮದುರ್ಗ ಮಾರ್ಗವಾಗಿ ಧಾರವಾಡವರೆಗೆ ರೈಲ್ವೆ ಮಾರ್ಗ ಆರಂಭಿಸುವಂತೆ ಒತ್ತಾಯಿಸಿ ತಾಲೂಕು ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಗೋಕಾಕ ಗೃಹ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಗೆ ಮನವಿ ಸಲ್ಲಿಸಿದರು.

20 ವರ್ಷಗಳಿಂದ ರಾಮದುರ್ಗದ ಜನತೆ ರೈಲ್ವೆ ಮಾರ್ಗಕ್ಕೆ ಒತ್ತಾಯಿಸಿ ನಿರಂತರ ಹೋರಾಡುತ್ತಿದ್ದಾರೆ. ಹೋರಾಟದ ಲದಿಂದ 2016&17ರಲ್ಲಿ ಸರ್ವೇ ನಡೆದು 2019ರಲ್ಲಿ 1667 ಕೋಟಿ ರೂ. ಕ್ರಿಯಾ ಯೋಜನೆ ತಯಾರಿಸಲಾಗಿದೆ. ನಂತರ ಕೆಲಸ ಪ್ರಾರಂಭಿಸಿಲ್ಲ. ಕೂಡಲೇ ಮತ್ತೆ ರಾಜ್ಯ ಸರ್ಕಾರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸರ್ವೇ ಮಾಡಿಸಿ, ಜಮೀನು ನೀಡಲು ಮುಖ್ಯಮಂತ್ರಿಗಳನ್ನು ಒತ್ತಾಯಿಸಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ ಅವರು, ಸ್ಥಳಿಯ ಶಾಸಕ ಅಶೋಕ ಪಟ್ಟಣ ಜತೆ ಸೇರಿಕೊಂಡು ಲೋಕಾಪುರ ಧಾರವಾಡಕ್ಕೆ ರೆಲ್ವೆ ಮಾರ್ಗ ಪ್ರಾರಂಭ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ರಾಮದುರ್ಗ ತಾಲೂಕು ರೆಲ್ವೆ ಹೋರಾಟ ಕ್ರಿಯಾ ಸಮಿತಿ ಮುಖಂಡ ಜಿ.ಎಂ.ಜೆನೇಖಾನ್​, ಮೊಹಮ್ಮದಶಫಿ ಬೆಣ್ಣಿ, ಚಂದ್ರು ಮಾಳದಕರ, ಎಂ.ಕೆ.ಯಾದವಾಡ, ಸುಭಾಷ ೂಡಕೆ, ಅಭಿಜಿತ ಮುನವಳ್ಳಿ, ದಾದಾಪೀರ ಕೆರೂರ, ಸಂಜೆಯ ಕಪಾಲಿ, ಮಾನವ ಬಂಧುತ್ವ ವೇದಿಕೆ ತಾಲೂಕು ಅಧ್ಯ ಭೀಮಶಿ ಕನಕನ್ನವರ ಇತರರಿದ್ದರು.