ರಾಯಚೂರು ಮಹಾತ್ಮ ಗಾಂಽ ನಗರ ವಿಕಾಸ ಯೋಜನೆ ಅಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ೨೦೦ ಕೋಟಿ ರೂ. ಅನುದಾನದ ಕರಡು ಕ್ರಿಯಾ ಯೋಜನೆಗೆ ಕೆಲ ಕಾಮಗಾರಿ ಸೇರ್ಪಡೆಯೊಂದಿಗೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಸರ್ವಾನುಮತದಿಂದ ಅನುಮೋದನೆ ನೀಡಿತು.
ನಗರದ ಮಹಾನಗರ ಪಾಲಿಕೆಯ ಕಚೇರಿ ಸಭಾಂಗಣದಲ್ಲಿ ಪಾಲಿಕೆ ಅಧ್ಯಕ್ಷೆ ನರಸಮ್ಮ ಮಾಡಗಿರಿ ಅಧ್ಯಕ್ಷತೆಯಲ್ಲಿ ಸಭೆ ಪ್ರಾರಂಭವಾಯಿತು. ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಕೆ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಮಹಾತ್ಮ ಗಾಂಽ ನಗರ ವಿಕಾಸ ಯೋಜನೆ ಅಡಿ ೨೦೦ ಕೋಟಿ ರೂ.ಅನುದಾನ ಬಿಡುಗಡೆಗೊಂಡಿದೆ. ಕೇಂದ್ರದ ಸಾಲರೂಪ ಮತ್ತು ರಾಜ್ಯ ಸರ್ಕಾರದ ಪಾಲು ಹಾಗೂ ಸ್ಥಳೀಯ ಮಹಾನಗರ ಪಾಲಿಕೆಯ ಹಣ ಹೊಂದಾಣಿಕೆಯೊAದಿಗೆ ಬೃಹತ್ ಯೋಜನೆಗೆ ಮಹಾನಗರ ಪಾಲಿಕೆ ಅನುಮೋದನೆ ನೀಡಲಾಯಿತು.
ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ ಮಾತನಾಡಿ, ಸರ್ಕಾರದ ಮಾರ್ಗಸೂಚಿ ಅನ್ವಯ ಜಿ¯್ಲÁಽಕಾರಿಗಳ ಅಧ್ಯಕ್ಷತೆ ಹಾಗೂ ಆಯುಕ್ತರು ಹಾಗೂ ಇನ್ನಿತರೆ ಸದಸ್ಯರ ಸಮಿತಿಯ ಶಿ-Áರಸ್ಸಿನ ಮೇರೆಗೆ ೨೦೦ಕೋಟಿ ರೂ. ಅನುದಾನ ಬಳಕೆಗೆ ಅವಕಾಶಗಳಿವೆ. ನಗರದಲ್ಲಿ ಸಣ್ಣಪುಟ್ಟ ಕೆಲಸ ತೆಗೆದುಕೊಳ್ಳಲು ಈ ಅನುದಾನದಲ್ಲಿ ಅವಕಾಶಗಳಿಲ್ಲ. ಈ ಕರಡು ಯೋಜನೆ ಶಾಶ್ವತ ಯೋಜನೆಯನ್ನಾಗಿ ಸಿದ್ಧಗೊಳಿಸಿ ಜಿ¯್ಲÁಽಕಾರಿಗಳ ನೇತೃತ್ವದಲ್ಲಿ ಪ್ರಸ್ತಾವನೆ ರಾಜ್ಯ ಹಣಕಾಸು ಇಲಾಖೆಗೆ ಸಲ್ಲಿಸಬೇಕಾಗಿದೆ.
ನಗರದ ಮುಖ್ಯ ರಸ್ತೆಗಳು, ಮುಖ್ಯ ಉದ್ಯಾನವನ, ಮುಖ್ಯ ಪೈಪï ಲೈನï ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲು ಸರ್ಕಾರದ ಮಾರ್ಗ ಸೂಚನೆಗಳಿವೆ. ಉದ್ದೇಶದ ೨೦೦ ಕೋಟಿ ರೂ ಅನುದಾನದಲ್ಲಿ ಎಸ್‌ಸಿಪಿ ಅಡಿ ೩೪ ಕೋಟಿ ರೂ.ಬಳಕೆಗೆ ಅವಕಾಶಗಳಿದ್ದು, ಪರಿಶಿಷ್ಟ ಜÁತಿ ಮತ್ತು ಪಂಗಡ ಅತ್ಯಽಕ ಜನ ವಾಸವಾಗಿರುವ ವಾರ್ಡ್ಗಳಲ್ಲಿ ಈ ಅನುದಾನ ಬಳಿಸಲಾಗುತ್ತದೆ ಎಂದರು.
ಮಹಾನಗರ ಪಾಲಿಕೆಗೆ ತುರ್ತಾಗಿ ಕಾರ್ಯ ನಿರ್ವಹಿಸಲು ೧೩೬ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲು ಸಾಮಾನ್ಯ ಸಭೆ ಒಪ್ಪಿಗೆ ನೀಡಿದೆ. ಇರುವ ಸಿಬ್ಬಂದಿ ಕೊರತೆ ನಿವಾರಣೆಗೆ ೧೩೬ ಸಿಬ್ಬಂದಿ ಹೊರಗುತ್ತಿಗೆ ನೇಮಕ ಅಗತ್ಯ ಬಗ್ಗೆ ಪ್ರಸ್ತಾಪಿಸಲಾಯಿತು. ಮಹಾನಗರ ಪಾಲಿಕೆಯಲ್ಲಿ ಈಗ ಸಿಬ್ಬಂದಿಯ ಕೊರತೆ ಗಂಭೀರವಾಗಿದೆ .ಬಿಲï ಕಲೆಕ್ಟರ್ ಹುz್ದೆಗೆ ೯ ಜನ ಸಿಬ್ಬಂದಿಗಳು ಅಗತ್ಯವಿದ್ದರೆ, ಕೇವಲ ಒಬ್ಬರು ಮಾತ್ರ ಇz್ದÁರೆ. ಈ ರೀತಿ ಸಿಬ್ಬಂದಿಯ ಕೊರತೆಯಿಂದಾಗಿ ಆಡಳಿತ ನಿರ್ವಹಣೆಗೆ ಸಮಸ್ಯೆಯಾಗಿದೆ ಎಂದರು.
ಸದಸ್ಯರ ಮಾತಿನ ಚಕಮಕಿ
ಕ್ರೀಯಾಯೋಜನೆ ಸಭೆಯಲ್ಲಿ ವಿಷಯ ಪ್ರಸ್ತಾಪನೆ ಮಾಡುತ್ತಿದ್ದಂತೆ ಬಿಜೆಪಿ ಸದಸ್ಯರಾದ ಕೆ.ನಾಗರಾಜ ಹಾಗೂ ಕಾಂಗ್ರೆಸ್ ಸದಸ್ಯ ಶ್ರೀನಿವಾಸ ರೆಡ್ಡಿ ಸೇರಿ ಬಿಜೆಪಿ ಮತ್ತು ಕಾಂಗ್ರೆಸï ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ಕರಡು ಕ್ರಿಯಾ ಯೋಜನೆ ರಚನೆ ಸಂದರ್ಭದಲ್ಲಿ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎನ್ನುವ ಆರೋಪ ಕೇಳಿಬಂದಿದ್ದು.
ಕಾAಗ್ರೆಸ್ ಸದಸ್ಯ ಜಯಣ್ಣ ಮಾತನಾಡಿ, ಇಲ್ಲಿ ವಾರ್ಡ್ಗಳಿಗಿಂತ ನಗರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಗರ ತನ್ನ ಮುಖವನ್ನೇ ಕಳೆದುಕೊಂಡಿದೆ. ಈ ರೀತಿ ಆಗಲು ನಾವೆಲ್ಲರೂ ಜವಾಬ್ದಾರರಾಗಿದ್ದೇವೆ. ನಗರ ಮುಚ್ಚು ಹೋಗಲು ಶಾಸಕರು, ಹಿಂದಿನ ಸಂಸದರು ಎಲ್ಲರೂ ಜವಾಬ್ದಾರಾಗಿದ್ದಾರೆ. ನಗರದ ಎಲ್ಲಾ ಪ್ರಮುಖ ರಸ್ತೆಗಳ ನಿರ್ಮಾಣಕ್ಕೆ ಅವಕಾಶವಿದೆ. ಸಮಗ್ರವಾದ ಯೋಜನೆ ರೂಪಿಸಬೇಕಿದೆ. ನಗರ ಸ್ಥಿತಿ ಗಂಬೀರವಾಗಿದೆ. ತೋಘಲಕ ದರ್ಬಾರ ಮಾಡದೇ ದೊಡ್ಡ ಕೆಲಸಗಳಿಗೆ ಒತ್ತು ನೀಡಬೇಕಿದೆ ಎಂದರು. ಅನೇಕ ಸದಸ್ಯರು ವಾರ್ಡವಾರು ಅನುದಾನ ನೀಡಬೇಕೆಂದುಆಗ್ರಹಿಸಿದರು.
ನಗರಸಭೆ ಅನುದಾನದಲ್ಲಿ ಐದು ವಾಟರ್ ಟ್ಯಾಂಕರ್ ಖರೀದಿಗೆ ೧೦ ಲಕ್ಷ ರೂ ಹಾಗೂ ಇತರೆ ಕುಡಿಯುವ ನೀರಿನ ಕಾಮಗಾರಿಗೆ ಅನುಮೋದನೆ ನೀಡಲಾಯಿತು. ಚರಂಡಿಗಳ (ಸಿವರೇಜ್ ಹೋಲ್) ನಿರ್ವಹಣೆಗೆ ಅಧುನಿತ ತಂತ್ರಜ್ಞಾದನದ ಯಂತ್ರ ಖರೀಽ, ಓವರ್ ಹೆಡ್ ಟ್ಯಾಂಕ್‌ಗಳನ್ನು ನಗರ ನೀರು ಮತ್ತು ಚರಂಡಿ ನಿಗಮಕ್ಕೆ ವಹಿಸಲು ತೀರ್ಮಾನಿಸಲಾಯಿತು. ಮುಂದಿನ ೧೫ ವರ್ಷದ ನಗರ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರಿನ ವ್ಯವಸ್ಥೆಗೆ ರಾಂಪೂರು ಜಲಾಶಯ ಮತ್ತು ಚಿಕ್ಕಸೂಗೂರು ಜಲಾಶಯದಲ್ಲಿ ಕೆರೆ ನಿರ್ಮಾಣ ಹಾಗೂ ಕೃಷ್ಣ ಮತ್ತು ತುಂಗಭದ್ರ ನದಿ ನೀರು ಪೂರೈಕೆಗೆ ನಿರ್ವಹಣೆಗೆ ಖಾಸಗಿ ಸಂಸ್ಥೆಗೆ ವಹಿಸಲು ಸಭೆ ತೀರ್ಮಾನಿಸಿತು.
೩ ಕೋಟಿ ರೂ ವೆಚ್ಚದಲ್ಲಿ ಹಳೆ ಜಿಲ್ಲಾಽಕಾರಿಗಳ ಕಚೇರಿ ನವೀಕರಣ ಮೊದಲ ಹಂತದ ೭೦ ಸಾವಿರ ರೂ ಬಿಡುಗಡೆ, ಬೇಸಿಗೆ ದಿನಗಳಲ್ಲಿ ಸಾರ್ವಜನಿಕರ ಅನುಕೂಲಕ್ಕೆ ನೀರಿನ ಅರವಟ್ಟಿಗೆ, ಪ್ರಾಣಿ, ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲು
ಚರ್ಚಿಸಲಾಯಿತು. ಕೋಟೆ ಕಂದಕಗಳ ಒತ್ತುವರಿ ತೆರವುಗೊಳಿಸಲು ಸಭೆ ನಿರ್ಧರಿಸಿತು.
((ಬಾಕ್ಸ್ ಮಾಡಿ))
ನಗರದಲ್ಲಿ ಕುಡಿಯುವ ನೀರಿಗಾಗಿ ಜನರು ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಪಾಲಿಕೆ ಸದಸ್ಯ ಕೆ.ನಾಗರಾಜ ಅವರು ತೆಲುಗಿನಲ್ಲಯೇ ಪ್ರಶ್ನೆ ಮಾಡಿದರೆ, ಇನ್ನೋಬ ಸದಸ್ಯೆ ಶ್ರೀನಿವಾಸ ರೆಡ್ಡಿ ಅವರು ಸಹ ತೆಲುಗಿನಲ್ಲಿಯೆ ಉತ್ತರ ನೀಡಿ ಈ ನೀರಿನ ಸಮಸ್ಯೆ ಪರಿಹಾರ ನೀಡಬೇಕು ಎಂದು ಆಯುಕ್ತರಿಗೆ ಪ್ರಶ್ನೆ ಮಾಡಿದಾಗ ಇವರ ತೆಲುಗು ಮಾತನಾಡುವುದನ್ನು ನೋಡಿ ಪಾಲಿಕೆ ಆಯುಕ್ತ ಜುಬಿನ್‌ವ ಮೊಹಪಾತ್ರ ಬೆರಗಾದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸಾಜೀದ್ ಸಮೀರ್ ,ಸದಸ್ಯರಾದ ಲಲಿತ ಕಡಗೋಲ್ ಅಂಜನೇಯ,ಲಕ್ಷಿ÷್ಮÃ,ದರೂರ ಬಸವರಾಜ,ನಾಗರಾಜ,ನೂರ್ ಪಾಶ,ತಿಮ್ಮರೆಡ್ಡಿ, ಸಣ್ಣ ನರಸರೆಡ್ಡಿ ಸೆರಿ ಅನೇಕರುಬ ಇದ್ದರು.