ಮಂಗಳೂರು: ಎ.ಜೆ ಆಸ್ಪತ್ರೆಯಲ್ಲಿ ವಿಶ್ವ ಪಾರ್ಶ್ವವಾಯು ದಿನ(ಅ.29) ಅಂಗವಾಗಿ ಶೇ.50 ರಿಯಾಯಿತಿ ದರದಲ್ಲಿ ಸಮಗ್ರ ಪಾರ್ಶ್ವವಾಯು ತಪಾಸಣೆ ಅ.19ರಿಂದ 31ರವರೆಗೆ ನಡೆಯಲಿದೆ.
ಅಧಿಕ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್, ಬೊಜ್ಜು, ಹೃದ್ರೋಗ ಮತ್ತು ಧೂಮಪಾನದಂತಹ ಅಪಾಯಕಾರಿ ಅಂಶಗಳನ್ನು ಪರಿಹರಿಸುವುದರಿಂದ ಪಾರ್ಶ್ವವಾಯು ಬರುವ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ. ಪಾರ್ಶ್ವವಾಯುವಿನ ಬಗ್ಗೆ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಎ.ಜೆ ಆಸ್ಪತ್ರೆಯಲ್ಲಿ ಸಮಗ್ರ ಪಾರ್ಶ್ವವಾಯು ತಪಾಸಣಾ ಪ್ಯಾಕೇಜ್ ಕೇವಲ 2650 ರೂ. ಮೊತ್ತದಲ್ಲಿ ನೀಡಲಾಗುವುದು.
ರಕ್ತ ಪರೀಕ್ಷೆ: ಎಚ್‌ಬಿ, ಆರ್‌ಬಿಎಸ್, ಕ್ರಿಯಟಿನಿನ್, ಇಸಿಜಿ, ಕ್ಯಾರೋಟಿಡ್ ಡೊಪ್ಲರ್, ತಲೆಯ ಸ್ಕಾೃನ್, ನುರಿತ ನರರೋಗ ವೈದ್ಯರೊಂದಿಗೆ ಸಮಾಲೋಚನೆ. ವೈದ್ಯಕೀಯ ಸಮಾಲೋಚನೆಗೆ ನರರೋಗ ಶಾಸ್ತ್ರಜ್ಞ ಡಾ.ಸುರೇಶ ಬಿ.ವಿ. ಮತ್ತು ಡಾ.ಸೌರಭ್‌ರೈ ಲಭ್ಯರಿರುತ್ತಾರೆ. ನರರೋಗ ಶಾಸ್ತ್ರಜ್ಞರ ಸಲಹೆ ಮೇರೆಗೆ ಹೆಚ್ಚಿನ ತಪಾಸಣೆಗಳು ಅಗತ್ಯವಿದ್ದಲ್ಲಿ ಶೇ.25 ರಿಯಾಯಿತಿ.
ತಪಾಸಣೆ ಪ್ಯಾಕೇಜ್ ಪಡೆಯಲು ಪೂರ್ವ ನೋಂದಣಿ ಕಡ್ಡಾಯ. ಹೆಚ್ಚಿನ ವಿವರಗಳಿಗಾಗಿ ಹಾಗೂ ನೋಂದಣಿಗೆ 0824 6613165(ajhlounge@gmail.com) ಸಂಪರ್ಕಿಸುವಂತೆ ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.