ಜಿಲ್ಲೆ

ಪರಿಪೂರ್ಣ ಶಿಕ್ಷಣ ಇಂದಿನ ಅವಶ್ಯ: ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಮುಖ್ಯ ಸಂವಹನಾಧಿಕಾರಿ ಸುಧೀಶ್ ವೆಂಕಟೇಶ್

ಮೈಸೂರು: ಇಂದಿನ ದಿನಗಳಲ್ಲಿ ಸವಾಲುಗಳನ್ನು ಎದುರಿಸಲು ಬೇಕಾದ ಎಲ್ಲ ವಿಷಂುಗಳನ್ನು ಒಳಗೊಂಡ ಪರಿಪೂರ್ಣ ಶಿಕ್ಷಣ ನೀಡುವುದು ಮುಖ್ಯ ಎಂದು ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಮುಖ್ಯ ಸಂವಹನಾಧಿಕಾರಿ ಸುಧೀಶ್ ವೆಂಕಟೇಶ್ ತಿಳಿಸಿದರು.

ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವ ವಿದ್ಯಾಲಯ, ಎಸ್‌ಜೆಸಿಇ ಸಹಂೋಗದಲ್ಲಿ ಶನಿವಾರ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಹಿರಿಂು ವಿದ್ಯಾರ್ಥಿಗಳ ಸಮ್ಮಿಲನ ಕಾಂರ್ುಕ್ರಮ ಉದ್ಘಾಟಿಸಿ ಅವರು ವಾತನಾಡಿದರು.

ಹವಾವಾನ ವೈಪರಿತ್ಯ, ಸಂಪತ್ತಿನ ಅಸಮರ್ಪಕ ಹಂಚಿಕೆ, ಅಂತಾರಾಷ್ಟ್ರೀಂು ವ್ಯಾಪಾರದಲ್ಲಿ ಉಂಟಾಗಿರುವ ಸ್ಪರ್ಧೆಂುಂತಹ ಸವಾಲು ಎದುರಿಸುವ ವಿಷಯವನ್ನು ಇಂಜಿನಿಯರಿಂಗ್‌ನಲ್ಲಿ ಬೋಧಿಸಬೇಕು ಎಂದು ಹೇಳಿದರು.

ಶಿಕ್ಷಣ ಸಂಸ್ಥೆಗಳು ಜಾಗತಿಕ ಸಮಸ್ಯೆಗಳನ್ನು ಎದುರಿಸಲು ಬೇಕಾದ ಜ್ಞಾನವನ್ನು ನೀಡುವ ಬಹುಶಿಸ್ತೀಂು ಅಧ್ಯಂುನ ವಿಷಂುಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಇಂದಿನ ದಿನದಲ್ಲಿ ಹವಾವಾನ ವೈಪರಿತ್ಯ, ಸಂಪತ್ತಿನ ಅಸಮರ್ಪಕ ಹಂಚಿಕೆ, ಅಂತಾರಾಷ್ಟ್ರೀಂು ವ್ಯಾಪಾರದಲ್ಲಿ ಸ್ಪರ್ಧೆ ಹೆಚ್ಚಾಗಿದೆ. ಹಾಗಾಗಿ ಅಂತಹ ಸವಾಲುಗಳನ್ನು ಸಮರ್ಪಕವಾಗಿ ಎದುರಿಸುವ ವಿಷಂುವನ್ನು ಅಧ್ಯಂುನ ವಾಡಬೇಕಿದೆ ಎಂದು ಸಲಹೆ ನೀಡಿದರು.

ಮನುಷ್ಯನ ಜೀನ್‌ಗಳ ಕುರಿತು ಅಧ್ಯಂುನ ವಾಡುವಾಗ ಹಾಗೂ ಕೆಲವು ಕಾಯಿಲೆಗಳಿಗೆ ಕುರಿತು ಸಂಶೋಧನೆ ವಾಡುವಾಗ ಜೀವಶಾಸ್ತ್ರದೊಂದಿಗೆ ಕಂಪ್ಯೂಟರ್ ವಿಜ್ಞಾನ ಸಹಕಾರಿಂಾಗುತ್ತದೆ ಎಂದರು.

ಇದಲ್ಲದೇ ಮನುಷ್ಯನ ಮೆದುಳಿನ ನಾನಾ ಭಾಗಗಳು ಒಟ್ಟಾಗಿ ಸೇರಿ ಮನುಷ್ಯ ಆಲೋಚನೆ ವಾಡುವಂತೆ ವಾಡುತ್ತವೆ. ಈ ರೀತಿ ಇಂಜಿನಿಂುರಿಂಗ್ ವಿದ್ಯಾರ್ಥಿಗಳು ತಾವು ಓದುತ್ತಿರುವ ವಿಷಂುದೊಂದಿಗೆ ಪರಿಸರ ಅಧ್ಯಂುನ, ಇತಿಹಾಸ, ರಾಜಕೀಂು ಸೇರಿದಂತೆ ಇನ್ನಿತರ ವಿಷಂುಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ಸಲಹೆ ನೀಡಿದರು.

ಇಂಜಿನಿಂುರಿಂಗ್ ವಿದ್ಯಾರ್ಥಿಗಳಿಗೆ ಸಾವಾಜಿಕ ಮೌಲ್ಯಗಳು ಜವಾಬ್ದಾರಿಗಳ ಬಗ್ಗೆ ತಿಳಿಸಿಕೊಡಬೇಕು. ಶಿಕ್ಷಣ ಪಡೆದ ವಿದ್ಯಾರ್ಥಿಗಳು ನಾನಾ ಕ್ಷೇತ್ರದಲ್ಲಿ ಕೆಲಸ ವಾಡುವ ಮುಖಾಂತರ ದೇಶದ ಆರ್ಥಿಕತೆಗೆ ತಮ್ಮದೇ ಕೊಡುಗೆ ನೀಡುತ್ತಾರೆ. ಕೆಲಸ ವಾಡುವಾಗ ಪ್ರಾವಾಣಿಕತೆ, ಪರಸ್ಪರ ಗೌರವಹಿಸುವುದು, ವೃತ್ತಿಪರ ಮೌಲ್ಯಗಳಿಗೆ ಧಕ್ಕೆಂಾಗದಂತೆ ನೋಡಿಕೊಳ್ಳಬೇಕು ಎಂದರು.

ಆರ್ಥಿಕ ಸಚಿವಾಲಂುದ ಕಸ್ಟಮ್ಸ್ ಅಂಡ್ ಇಂಡೈರೆಕ್ಟ್ ಟ್ಯಾಕ್ಸ್‌ನ ನಿರ್ದೇಶಕ ಎಂ.ವಿ. ಬದರಿ ಪ್ರಸಾದ್, ಜೆಎಸ್‌ಎಸ್-ಎಸ್‌ಟಿಂುು ಕುಲಪತಿ ಡಾ.ಎ.ಎನ್. ಸಂತೋಷ್‌ಕುವಾರ್, ಕುಲಸಚಿವ ಡಾ.ಎಸ್.ಎ.ಧನರಾಜ್, ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಬಿ.ಸುರೇಶ್, ಎಸ್‌ಜೆಸಿಇ ಪ್ರಭಾರ ಪ್ರಾಂಶುಪಾಲ ಡಾ.ಸಿ.ನಟರಾಜು ಇದ್ದರು.