ಹುಣಸೂರು ತಾಲೂಕು ಮಟ್ಟದ ಪಿಯು ಕಾಲೇಜು ವಿಭಾಗದ ಕ್ರೀಡಾಕೂಟದಲ್ಲಿ ಸಂತ ಜೋಸೆಫರ ಪಿಯು ಕಾಲೇಜು ಕ್ರೀಡಾಪಟುಗಳು ಉತ್ತಮಪ್ರದರ್ಶನ ನೀಡಿ ಬಾಲಕಿಯರ ವಿಭಾಗದ ಸಮಗ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಾಂಶುಪಾಲೆ ಸಿಸ್ಟರ್ ಅನಿತಾ ಇ ಡಯಾಸ್, ದೈಹಿಕ ಶಿಕ್ಷಕರು ಮತ್ತು ಕ್ರೀಡಾಪಟುಗಳು ಇದ್ದರು. 
ಜಿಲ್ಲೆ

ಸಂತ ಜೋಸೆಫರ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ

ಲೋಕೇಶ್ ಮನು. ಡಿ

ಹುಣಸೂರು: 2025-26ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದ ಕಾಲೇಜು ಬಾಲಕಿಯರ ವಿಭಾಗದಲ್ಲಿ ನಗರದ ಸಂತ ಜೋಸೆಫರ ಪಿಯು ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ.

ತಾಲೂಕು ಕ್ರೀಡಾಂಗಣ ಮತ್ತು ಟ್ಯಾಲಂಟ್ ವಿದ್ಯಾಸಂಸ್ಥೆ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಸಂತ ಜೋಸೆಫರ ಕಾಲೇಜಿನ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಥ್ರೋಬಾಲ್(ಬಾಲಕಿಯರ ವಿಭಾಗ) ಪ್ರಥಮಸ್ಥಾನ, ವಾಲಿಬಾಲ್ (ಬಾಲಕಿಯರ ವಿಭಾಗ) ಪ್ರಥಮ, ಥ್ರೋಬಾಲ್ (ಬಾಲಕರ ವಿಭಾಗ) ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಅಥ್ಲೆಟಿಕ್ಸ್ ಬಾಲಕರ ವಿಭಾಗದಲ್ಲಿ 3,000 ಮೀ. ಓಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ್ದರೆ, 800 ಮೀ. ಓಟದಲ್ಲಿ ದ್ವಿತೀಯ, ಎತ್ತರ ಜಿಗಿತ ದ್ವಿತೀಯ, ಉದ್ದ ಜಿಗಿತ ತೃತೀಯ, ಟ್ರಿಪಲ್ ಜಂಪ್ ತೃತೀಯ, ಗುಂಡು ಎಸೆತ ತೃತೀಯ, 4*100 ರಿಲೇ ತೃತೀಯ, 4*400 ರಿಲೇ ತೃತೀಯ ಸ್ಥಾನ ಗಳಿಸಿದರು.

ಬಾಲಕಿಯರ ಅಥ್ಲೆಟಿಕ್ಸ್ ವಿಭಾಗದ ರೆಸ್ ವಾಕ್‌ನಲ್ಲಿ ಪ್ರಥಮ, ತಟ್ಟೆಎಸೆತ ಪ್ರಥಮ, ಗುಂಡು ಎಸೆತ ಪ್ರಥಮ, ಎತ್ತರ ಜಿಗಿತ-ಪ್ರಥಮ, 800 ಮೀ. ಪ್ರಥಮ ಮತ್ತು ತೃತೀಯ, ಟ್ರಿಪಲ್ ಜಂಪ್ ದ್ವಿತೀಯ, 100ಮೀ. ತೃತೀಯ, 1,500 ಮೀ.-ತೃತೀಯ, 3000ಮೀ. ತೃತೀಯ ಸ್ಥಾನ ಪಡೆಯುವ ಮೂಲಕ ಬಾಲಕಿಯರ ವಿಭಾಗ ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ. ಕ್ರೀಡಾಪಟುಗಳ ಸಾಧನೆಯನ್ನು ಪ್ರಾಂಶುಪಾಲೆ ಸಿಸ್ಟರ್ ಅನಿತಾ ಇ ಡಯಾಸ್ ಅಭಿನಂದಿಸಿದ್ದಾರೆ.