ಜಿಲ್ಲೆ

ಬೆಟ್ಟದಪುರದ ಎಸ್‌ಎಂಎಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಬೆಟ್ಟದಪುರ: ಪಿರಿಯಾಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬೆಟ್ಟದಪುರದ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಥ್ಲೆಟಿಕ್ಸ್ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಬಾಲಕರ ವಿಭಾಗದಲ್ಲಿ ಥ್ರೋಬಾಲ್ ಮತ್ತು ಬಾಲ್ ಬ್ಯಾಡ್ಮಿಂಟನ್ ಪ್ರಥಮ ಸ್ಥಾನ, ವಾಲಿಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ, 4/100 ರಿಲೇಯಲ್ಲಿ ಸಮೀರ್ ಅಹ್ಮದ್, ಆಕಾಶ್ ಗೌಡ, ಆಕಾಶ್ ವಿ.ಜೆ, ಸಂಪತ್ ಕುಮಾರ್ ಪ್ರಥಮ ಸ್ಥಾನ, 4/400 ರಿಲೇಯಲ್ಲಿ ಗೌತಮ್, ಪವನ್, ಧನುಷ್, ವಿಶ್ವಾಸ್ ದ್ವಿತೀಯ ಸ್ಥಾನ, ಬಾಲಕಿಯರ ವಿಭಾಗದಲ್ಲಿ ಕಬಡ್ಡಿ ದ್ವಿತೀಯ ಸ್ಥಾನ, 4/400 ರಿಲೇಯಲ್ಲಿ ಪ್ರಾರ್ಥನಾ, ಧನ್ಯಾ, ಭವಾನಿ ಯಶಸ್ವಿನಿ ಪ್ರಥಮ ಸ್ಥಾನ, 4/100 ರಿಲೇಯಲ್ಲಿ ಶಾಂಭವಿ ಯಶಸ್ವಿನಿ, ಪವಿತ್ರಾ, ಮಹಾಲಕ್ಷ್ಮೀ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಅಥ್ಲೆಟಿಕ್ಸ್ ವಿಭಾಗದಲ್ಲಿ 3000ಮೀ. ಓಟ ಹಾಗೂ ಎತ್ತರ ಜಿಗಿತದಲ್ಲಿ ಗೌತಮ್ ಡಿ.ಎಸ್ (ತೃ), 3000 ಮೀ. ಹಾಗೂ ಜಾವಲಿನ್ ಥ್ರೊನಲ್ಲಿ ಪ್ರಾರ್ಥನಾ (ದ್ವಿ), ಉದ್ದ ಜಿಗಿತದಲ್ಲಿ ಪವಿತ್ರಾ (ಪ್ರ), 1500ಮೀ. ಓಟದಲ್ಲಿ ಧನ್ಯಾ ಟಿ.ಪಿ (ತೃ) ಸ್ಥಾನ, ಎತ್ತರ ಜಿಗಿತದಲ್ಲಿ ಸಂಜನಾ (ಪ್ರ), 200 ಮೀ. ಓಟದಲ್ಲಿ ಶಾಂಭವಿ (ದ್ವಿ), 400ಮೀ. ಓಟದಲ್ಲಿ ಆಕಾಶ್ ವಿ.ಜೆ (ಪ್ರ) ಹಾಗೂ 800 ಮೀ ಓಟ (ತೃ), 400 ಮೀ. ಓಟದಲ್ಲಿ ಪೂರ್ಣಿಮಾ (ದ್ವಿ), ಜಾವಲಿನ್ ಥ್ರೊ ಜೀವನ್ (ದ್ವಿ), 100 ಮೀ. ಓಟದಲ್ಲಿ ಮಹಾಲಕ್ಷ್ಮೀ (ದ್ವಿ), ಗುಂಡು ಎಸೆತದಲ್ಲಿ ಅನುಷಾ (ತೃ) ಸ್ಥಾನ ಪಡೆದುಕೊಂಡಿದ್ದಾರೆ.

ವಿಜೇತ ಎಲ್ಲ ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಎಸ್‌ಎಂಎಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ವಿ ಮಂಜುನಾಥ್, ಕಾರ್ಯದರ್ಶಿ ಎ.ವಿ ಛಾಯಾ, ತಾಲೂಕು ದೈಹಿಕ ಶಿಕ್ಷಣ ನಿರೀಕ್ಷಕರಾದ ರಮೇಶ್, ದಿನೇಶ್, ಪ್ರಾಂಶುಪಾಲ ರಾಜ ಎಸ್.ಕೆ, ಕ್ರೀಡಾ ಕಾರ್ಯದರ್ಶಿಗಳಾದ ಶಿವಕುಮಾರ್, ಸತೀಶ್ , ಉಪನ್ಯಾಸಕರಾದ ಕುಬೇರ್, ವಸಂತ್, ಯಶವಂತ ಕುಮಾರ್, ಸುನೀಲ್, ಬಸವರಾಜು, ಪ್ರತಾಪ, ಹರ್ಷಿತ, ನವೀನ್ ಕುಮಾರ್, ಮಂಜುನಾಥ್, ರಾಮೇಗೌಡ, ರಶ್ಮಿ, ಶಿವನಂಜು ಇದ್ದರು.