ಶೃಂಗೇರಿ: ಬೇಗಾರಿನ ಕರ್ನಾಟಕ್ ಪಬ್ಲಿಕ್ ಸ್ಕೂಲ್‌ನ ಪದವಿಪೂರ್ವ ವಿಭಾದಲ್ಲಿ ನಡೆದ ಶೃಂಗೇರಿ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಜೆಸಿಬಿಎಂ ಪಿಯು ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗುವ ಮೂಲಕ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.
ಬಾಲಕರ ವಿಭಾಗದ ಕಬಡ್ಡಿ , ಖೋ ಖೋ, ಬಾಲ್ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಯೋಗ, ಚೆಸ್, ಕ್ರಾಸ್ ಕಂಟ್ರಿ ರೇಸ್‌ನಲ್ಲಿ ಪ್ರಥಮ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಥ್ರೋಬಾಲ್, ಟೇಬಲ್ ಟೆನಿಸ್, ಬಾಲ್‌ಬ್ಯಾಡ್ಮಿಂಟನ್, ಯೋಗ, ಚೆಸ್‌ನಲ್ಲಿ ಪ್ರಥಮ, ಖೋ ಖೋದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರಸಿಕಾ ಚಾಂಪಿಯನ್ ಎನಿಸಿಕೊಂಡಳು. ಬಾಲಕರ ವಿಭಾಗದ ಅಥ್ಲೆಟಿಕ್ಸ್‌ನಲ್ಲಿ 110 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾಚಾರ್ಯ ಡಾ. ಎಂ.ಸ್ವಾಮಿ, ಉಪ ಪ್ರಾಚಾರ್ಯ ಎ.ಜಿ.ಪ್ರಶಾಂತ, ದೈಹಿಕ ಶಿಕ್ಷಣ ನಿರ್ದೇಶಕ ರವಿಕಿರಣ್, ಕ್ರೀಡಾ ಸಲಹಾ ಸಮಿತಿ ಸದಸ್ಯರಾದ ಹಸೀನಾ ಭಾನು, ನೀತಾ, ಮೇಘಾ, ಶಾಲಿನಿ ರಾಮಕೃಷ್ಣ, ವಿಘ್ನೇಶ್ ಮತ್ತು ಕಾಲೇಜಿನ ಸಿಬ್ಬಂದಿ ವಿದ್ಯಾರ್ಥಿಗಳನ್ನು ಶ್ಲಾಘಿಸಿದ್ದಾರೆ.