ಕಡೂರು: ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಚಕ್ರವರ್ತಿ ಪಿಯು ಕಾಲೇಜು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ ಎಂದು ಕಾಲೇಜಿನ ಪ್ರಾಚಾರ್ಯ ಬಿ.ಯು.ರುದ್ರೇಶ್ ತಿಳಿಸಿದರು.
ಇತ್ತೀಚೆಗೆ ನಡೆದ ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದ ಷಟಲ್ ಬ್ಯಾಡ್ಮಿಂಟನ್, ಟೆನ್ನಿಕಾಯ್ಟಿ, ಯೋಗ, ಚೆಸ್, 5000 ಮೀಟರ್ ಓಟ, ಹ್ಯಾಮರ್ ಎಸೆತಗಳಲ್ಲಿ ಪ್ರಥಮ, 100 ಮೀ. 5000 ಮೀ ನಡಿಗೆ, ರಿಲೇ, ಹ್ಯಾಮರ್ ಎಸೆತಗಳಲ್ಲಿ ದ್ವಿತೀಯ ಸ್ವಾನ ಪಡೆದುಕೊಂಡಿದ್ದು, ಬಾಲಕಿಯರ ವಿಭಾಗದಲ್ಲಿ ಉದ್ದ ಜಿಗಿತ, ಎತ್ತರ ಜಿಗಿತಗಳಲ್ಲಿ ಪ್ರಥಮ, 100 ಮೀ ಓಟದಲ್ಲಿ ತೃತೀಯ, ರಿಲೇಯಲ್ಲಿ ದ್ವಿತೀಯ ಸ್ಥಾನ ಗಳಿಸಲಾಗಿದೆ ಎಂದು ಮಾಹಿತಿ ನೀಡಿದರು.