ಜಿಲ್ಲೆ

ಆಳ್ವಾಸ್ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ : ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆ

ಸೌಮ್ಯ ಆರ್

ಮೂಡುಬಿದಿರೆ: ಜಿಲ್ಲಾಮಟ್ಟದ ಅಂಡರ್ 19 ಎಸ್‌ಜಿಎಫ್‌ಐ ಯೋಗಾಸನ ಸ್ಪರ್ಧೆಯಲ್ಲಿ ಆಳ್ವಾಸ್ ಪಿಯು ಕಾಲೇಜಿನ ಬಾಲಕ ಮತ್ತು ಬಾಲಕಿಯರು ತಂಡ ಪ್ರಶಸ್ತಿ ಪಡೆದುಕೊಂಡಿದೆ.

ಒಟ್ಟು 12 ಪದಕಗಳಲ್ಲಿ ಆಳ್ವಾಸ್‌ನ ವಿದ್ಯಾರ್ಥಿಗಳು 10 ಪದಕ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲಾ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ (ಪದವಿಪೂರ್ವ) ಮತ್ತು ಸ್ವಸ್ತಿಕ್ ನ್ಯಾಷನಲ್ ಬುಸಿನೆಸ್ ಸ್ಕೂಲ್ ಮಂಗಳೂರು ಆಶ್ರಯದಲ್ಲಿ ಸ್ಪರ್ಧೆ ಆಯೋಜಿಸಲಾಯಿತು.

ಆರ್ಟಿಸ್ಟಿಕ್ ಪೇರ್: ಬಾಲಕರ ವಿಭಾಗದಲ್ಲಿ ಚಂದ್ರಶೇಖರ ಮತ್ತು ಪೃಥ್ವಿಚಾರ್-ಪ್ರಥಮ, ಆರ್ಟಿಸ್ಟಿಕ್ ಪೇರ್: ಬಾಲಕಿಯರ ವಿಭಾಗದಲ್ಲಿ ಸಂಜನಾ ಮತ್ತು ಕವನಾ-ಪ್ರಥಮ , ರಿದಮಿಕ್ ಪೇರ್: ಬಾಲಕರ ವಿಭಾಗದಲ್ಲಿ ಪೃಥ್ವಿಚಾರ್ ಮತ್ತು ಕುಮಾರ್-ಪ್ರಥಮ, ರಿದಮಿಕ್ ಪೇರ್: ಬಾಲಕಿಯರ ವಿಭಾಗದಲ್ಲಿ ಕವನಾ ಮತ್ತು ಅನನ್ಯಾ-ಪ್ರಥಮ, ಆರ್ಟಿಸ್ಟಿಕ್ ಸಿಂಗಲ್: ಬಾಲಕರ ವಿಭಾಗದಲ್ಲಿ ಕುಮಾರ್-ಪ್ರಥಮ, ಆರ್ಟಿಸ್ಟಿಕ್ ಸಿಂಗಲ್: ಬಾಲಕಿಯರ ವಿಭಾಗದಲ್ಲಿ ಅನನ್ಯಾ-ಪ್ರಥಮ, ಟ್ರೆಡಿಶನಲ್ ವಿಭಾಗ: ಬಾಲಕಿಯರ ವಿಭಾಗದಲ್ಲಿ ಕವನಾ-ದ್ವಿತೀಯ ಪಡೆದಿದ್ದಾರೆ. ಪದಕ ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.