ಜಿಲ್ಲೆ

ಬೆಳೆ ನಷ್ಟ ಪರಿಹಾರಕ್ಕೆ ಕ್ರಮ

ಲಲಾಟಾಕ್ಷ ಎಸ್

ಬೈಲಕುಪ್ಪೆ: ಮಳೆಯಿಂದ ಹಾನಿಗೊಳಗಾದ ಕೊಪ್ಪ, ಆವರ್ತಿ, ದಿಂಡಗಾಡು ಗ್ರಾಮಗಳಿಗೆ ರೇಷ್ಮೆ ಸಚಿವ ಕೆ.ವೆಂಕಟೇಶ್ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.


ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಲ್ಡನ್ ಟೆಂಪಲ್ ಕಡೆಗೆ ಹೋಗುವ ಮುಖ್ಯ ರಸ್ತೆ ಮತ್ತು ಆವರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿ ದಿಂಡಗಾಡು, ಮುತ್ತಿನ ಮುಳಸೋಗೆ ಗ್ರಾಮಗಳಲ್ಲಿ ಹೊಗೆಸೊಪು, ಮುಸುಕಿನ ಜೋಳ. ಶುಂಠಿ ಬೆಳೆ ವೀಕ್ಷಿಸಿದರು. ಬಳಿಕ ಮಾತನಾಡಿದ ಸಚಿವ ಕೆ.ವೆಂಕಟೇಶ್, ಕೂಡಲೇ ಬೆಳೆ ನಷ್ಟ ಪರಿಶೀಲಿಸಿ ಸಂಬಂಧಪಟ್ಟ ದಾಖಲೆಗಳೊಂದಿಗೆ ರೈತರಿಂದ ಪಡೆದು ನನಗೆ ಮಾಹಿತಿ ನೀಡಬೇಕು. ಬೆಳೆ ನಷ್ಟಕ್ಕೆ ರೈತರಿಗೆ ಪರಿಹಾರ ಕೊಡಲಾಗುವುದು ಎಂದು ಭರವಸೆ ನೀಡಿದ ಅವರು, ಎತ್ತರದ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.


ತಹಸೀಲ್ದಾರ್ ಕುಂಞ ಅಹಮದ್, ತಾಪಂ ಇಒ ಸುನೀಲ್ ಕುಮಾರ್, ವೃತ್ತ ನಿರೀಕ್ಷಕ ದೀಪಕ್, ಬೈಲಕುಪ್ಪೆ ಪಿಎಸ್‌ಐ ಅಜಯ್ ಕುಮಾರ್, ಬಿ.ಜೆ.ಬಸವರಾಜ್, ಭುಜಂಗ, ಎಂ.ಬಿ.ಶಿವಕುಮಾರ್, ಧನರಾಜ್, ಅಸ್ಲಾಂ ಪಾಷ ಹಾಜರಿದ್ದರು.