ಕಂಪ್ಲಿ ಹಳೆಯ ಬಸ್ ನಿಲ್ದಾಣ ನವೀಕರಣಕ್ಕಾಗಿ ಬಳ್ಳಾರಿಯ ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಭಾಗವಾನ್ ಸ್ಥಳ ಪರಿಶೀಲಿಸಿದರು. ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಮುಖ್ಯಾಧಿಕಾರಿ ಕೆ.ದುರುಗಣ್ಣ ಇತರರಿದ್ದರು. 
ಜಿಲ್ಲೆ

ಡಿಪೋ ಆರಂಭಕ್ಕೆ 4 ಎಕರೆ ಜಮೀನು ಅಗತ್ಯ- ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಭಾಗವಾನ್ ಹೇಳಿಕೆ

ಶ್ರೀನಾಥ

ಕಂಪ್ಲಿ: ಪಟ್ಟಣದ ಹಳೆಯ ಬಸ್‌ನಿಲ್ದಾಣ ನವೀಕರಣ ಹಾಗೂ ಬಸ್ ಡಿಪೋ ನಿರ್ಮಾಣಕ್ಕಾಗಿ ಸ್ಥಳ ವೀಕ್ಷಿಸಲು ಬಳ್ಳಾರಿಯ ಕೆಕಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಭಾಗವಾನ್ ಗುರುವಾರ ಪಟ್ಟಣಕ್ಕೆ ಭೇಟಿ ನೀಡಿದ್ದರು.

ಪಟ್ಟಣದ ಹಳೆಯ ಬಸ್ ನಿಲ್ದಾಣ ನವೀಕರಿಸಲು ಜಾಗ ವೀಕ್ಷಿಸಿದ್ದು, ಜಾಗದ ವಿಸ್ತೀರ್ಣ, ಲಭ್ಯತೆ ನೋಡಿಕೊಂಡು ಬಸ್ ನಿಲ್ದಾಣ ನವೀಕರಿಸುವ ಯೋಜನೆ ರೂಪಿಸಲಾಗುವುದು. ಬಸ್ ಡಿಪೋ ಆರಂಭಿಸಲು ದೇವಸಮುದ್ರ ಕ್ರಾಸ್ ಬಳಿ ಈಗಾಗಲೇ ಸ್ಥಳ ವೀಕ್ಷಿಸಿದ್ದು, ಜಮೀನು ಬಸ್ ನಿಲ್ದಾಣದಿಂದ ದೂರವಿರುವ ಕಾರಣ ಅರಳಿಹಳ್ಳಿ ತಾಂಡ, ಕಣವಿ ತಿಮ್ಮಲಾಪುರ ಕಡೆ ಜಮೀನು ವೀಕ್ಷಿಸಲಾಗಿದೆ. ಬಸ್ ಡಿಪೋಗೆ ನಾಲ್ಕು ಎಕರೆ ಜಮೀನು ಅಗತ್ಯವಿದೆ ಎಂದರು.

ಎಇ ಮೇಘನಾ, ಎಇಇ ಅಣ್ಣಪ್ಪ, ಡಿಟಿಒ ಚಾಮರಾಜ, ಕಂದಾಯ ಅಧಿಕಾರಿ ವೈ.ಎಂ.ಜಗದೀಶ, ಸರ್ವೇಯರ್ ಅನಿಲ್ ಆಂಥೋನಿ, ಶಾಸಕರ ಆಪ್ತ ಸಹಾಯಕ ಸಂತೋಷ್, ಪ್ರಮುಖರಾದ ಜಿ.ಸುಧಾಕರ, ಆಟೋ ರಾಘವೇಂದ್ರ, ಪುರಸಭೆ ಸದಸ್ಯರು, ಸಿಬ್ಬಂದಿ ಇದ್ದರು.