ಕಂಪ್ಲಿ: ಜನಸಂಖ್ಯೆ ನಿಯಂತ್ರಣದಿಂದ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ತಹಸೀಲ್ದಾರ್ ಶಿವರಾಜ ಅಭಿಪ್ರಾಯಪಟ್ಟರು.
ವಿಶ್ವ ಜನಸಂಖ್ಯೆ ದಿನಾಚರಣೆ ನಿಮಿತ್ತ ಇಲ್ಲಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ದೇಶದ ಅಭಿವೃದ್ಧಿಯಲ್ಲಿ ಜನಸಂಖ್ಯೆಯ ಪಾತ್ರ ಮಹತ್ವದ್ದಾಗಿದೆ. ಈ ಕುರಿತು ಜನರು ಜಾಗ್ರತೆವಹಿಸಬೇಕು ಎಂದರು.
ಟಿಎಚ್‌ಒ ಡಾ.ಜಿ.ಅರುಣ್ ಮಾತನಾಡಿ, ಜಗತ್ತಿನಲ್ಲಿ ಭಾರತ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಮುಟ್ಟುವಲ್ಲಿ ಮುಂಚೂಣಿಯಲ್ಲಿದ್ದೇವೆ. ಸರ್ಕಾರ ಚಿಕ್ಕ ಕುಟುಂಬದ ಫಲಾನುಭವಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ದಂಪತಿಗಳು ಸದ್ಬಳಕೆ ಮಾಡಿಕೊಳ್ಳಬೇಕಿದೆ. ಮಹಿಳೆಯರು ತಾತ್ಕಾಲಿಕ ಸಂತಾನ ನಿಯಂತ್ರಣಕ್ಕಾಗಿ ಮಾಲಾ ಎನ್ ಮತ್ತು ಡಿ ಅಥವಾ ಛಾಯಾ ನುಂಗುವ ಮಾತ್ರೆ, ಮಕ್ಕಳ ಜನನ ಮಧ್ಯೆ ಅಂತರ ಕಾಪಾಡಿಕೊಳ್ಳಲು ಚುಚ್ಚುಮದ್ದು, ಕಾಪರ್-ಟಿ, ಪುರುಷರು ನಿರೋಧ ಬಳಸಬೇಕು. ಮೊದಲ ಮಗುವಿನ ಜನನ ನಂತರ ಎರಡನೇ ಮಗುವಿಗೆ ಕನಿಷ್ಠ 3 ವರ್ಷ ಅಂತರವಿರುವಂತೆ ದಂಪತಿಗಳು ನೋಡಿಕೊಳ್ಳಬೇಕು ಎಂದರು.
ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಜಾಥಾದಲ್ಲಿ ಪಾಲ್ಗೊಂಡಿದ್ದರು. ವೈದ್ಯರಾದ ವೀರೇಶ, ಭರತ್ ಪದ್ಮಶಾಲಿ, ಶ್ರೀನಿವಾಸರಾವ್, ಉಷಾ, ನಂದೀಶ, ಹಾರಿಕಾ, ವಿಶ್ವನಾಥ, ಸಿಬ್ಬಂದಿ ಕೆ.ಶೋಭಾ, ಪಿ.ಬಸವರಾಜ, ಚನ್ನಬಸವರಾಜ, ಪ್ರಭಾಕರ, ರೇವಣ್ಣ, ಕಾರ್ತೀಕ್ ಇತರರಿದ್ದರು.