ಕಂಪ್ಲಿ ಷಾಮಿಯಾಚಂದ್ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಂಗನವಾಡಿ ಮಕ್ಕಳು ಪಾಲ್ಗೊಂಡಿದ್ದರು. 
ಜಿಲ್ಲೆ

ಕಂಪ್ಲಿಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

ಕಂಪ್ಲಿ: ತಾಲೂಕಿನಾದ್ಯಂತ 78ನೇ ಸ್ವಾತಂತ್ರ್ಯೋತ್ಸವವನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.

ತಾಲೂಕಿನ ಸರ್ಕಾರಿ ಶಾಲಾ, ಕಾಲೇಜು, ಕಚೇರಿಗಳಲ್ಲಿ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ,

ನಟರಾಜ ಕಲಾವಿಜಯ ಸಂಘದಲ್ಲಿ ಅಧ್ಯಕ್ಷ ಕಟ್ಟೆ ಮಾರೆಪ್ಪ, ಕನ್ನಡ ಹಿತರಕ್ಷಕ ಸಂಘದ ಕಚೇರಿಯಲ್ಲಿ ಕೋಶಾಧ್ಯಕ್ಷ ಮಾ.ಶ್ರೀನಿವಾಸ್, ರಾಜ್ಯ ನಿವೃತ್ತ ನೌಕರರ ಸಂಘದ ಕಚೇರಿಯಲ್ಲಿ ತಾಲೂಕು ಅಧ್ಯಕ್ಷ ಎಂ.ಎಸ್.ಗಂಗಾಧರಯ್ಯ, ವೀರಶೈವ ಸಂಘದ ತಾಲೂಕು ಕಚೇರಿಯಲ್ಲಿ ಪ್ರಮುಖ ವಾಲಿ ಕೊಟ್ರಪ್ಪ, ಪತಂಜಲಿ ಯೋಗ ಸಮಿತಿ ಕಚೇರಿಯಲ್ಲಿ ರೈತ ಜಾಸ್ತಿ ಜಗಮೋಹನ್ ಧ್ವಜಾರೋಹಣ ನೆರವೇರಿಸಿದರು.

ಮೆಟ್ರಿ ಶಿವಪುರದ ಸಹಿಪ್ರಾ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ವೀರೇಶ್ ಮಕ್ಕಳಿಗೆ ನೋಟ್‌ಬುಕ್, ಪೆನ್ನು ವಿತರಿಸಿದರು. ತಾಪಂಯಲ್ಲಿ ಕೆಡಿಪಿ ಸದಸ್ಯರಾದ ಕಾಳಿಂಗವರ್ಧನ, ಜಡೆಪ್ಪ, ದೊಡ್ಡಬಸಪ್ಪ, ನಾಗೇಂದ್ರರನ್ನು ಗೌರವಿಸಲಾಯಿತು.