ಎನ್.ಆರ್.ಪುರ: 35 ಕೋಟಿ ರೂ. ವೆಚ್ಚದ ಎನ್.ಆರ್.ಪುರ- ಹೊನ್ನೇಕೊಡಿಗೆ ಸಂಪರ್ಕ
ಸೇತುವೆ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಬೇಕು. ಇಲ್ಲವಾದಲ್ಲಿ ಗುತ್ತಿಗೆದಾರರನ್ನು ಕಪ್ಪು
ಪಟ್ಟಿಗೆ ಸೇರಿಸಲಾಗುವುದು ಎಂದು ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್
ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
ಲೋಕಪಯೋಗಿ ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ್, ಭದ್ರಾ ಕಾಡಾ ಅಧ್ಯಕ್ಷ
ಡಾ.ಕೆ.ಪಿ.ಅಂಶುಮಂತ್ ಹಾಗೂ ಇತರ ಇಂಜಿನಿಯರ್ ಜತೆ ಎನ್.ಆರ್.ಪುರ,
ಹೊನ್ನೇಕೊಡಿಗೆ ಸಂಪರ್ಕ ಸೇತುವೆ ವೀಕ್ಷಣೆ ಹಾಗೂಪ್ರವಾಸಿ ಮಂದಿರದಿಂದ
ಸುಂಕದಕಟ್ಟೆಯವರೆಗೆ ರಸ್ತೆ ಅಗಲೀಕರಣ ಬಗ್ಗೆ ಸರ್ವೇ ಕಾರ್ಯದಲ್ಲಿ ಭಾಗವಿಸಿ ನಂತರ
ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಮಾತನಾಡಿ,
ಭದ್ರಾ ಹಿನ್ನೀರಿನಿಂದ ಹೊನ್ನೇಕೊಡಿಗೆ, ಎನ್.ಆರ್.ಪುರ ಮಧ್ಯ ನೀರು ನಿಂತಿದ್ದರಿಂದ ರಸ್ತೆ
ಸಂಪರ್ಕ ಕಡಿತವಾಗಿತ್ತು. ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 35 ಕೋಟಿ
ರೂ.ಅನುದಾನ ಬಿಡುಗಡೆ ಮಾಡಿಸಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಂದಲೇ
ಸೇತುವೆಗೆ ಶಂಕು ಸ್ಥಾಪನೆ ಮಾಡಿಸಿದ್ದೆ. ಈ ಸೇತುವೆ ನಿರ್ಮಾಣದಿಂದ ಹೊನ್ನೇಕೊಡಿಗೆ
ಗ್ರಾಮ ಪಂಚಾಯಿತಿಯ ಸಾವಿರಾರು ಗ್ರಾಮಸ್ಥರಿಗೆ ಪಟ್ಟಣಕ್ಕೆ ಬರಲು ಕೇವಲ 5- 6
ಕಿ.ಮೀ.ಸಾಕಾಗುತ್ತದೆ.ಪ್ರಸ್ತುತ ಹೊನ್ನೇಕೊಡಿಗೆ ಗ್ರಾಮಸ್ಥರು 18 ಕಿ.ಮಿ.ಸುತ್ತುವರಿದು
ನರಸಿಂಹರಾಜಪುರಕ್ಕೆ ಬರುತ್ತಿದ್ದಾರೆ. ಆದರೆ, ಸಂಬಂಧಪಟ್ಟ ಗುತ್ತಿಗೆದಾರರು,
ಇಂಜಿನಿಯರ್‌ಗಳ ನಿರ್ಲಕ್ಷ್ಯದಿಂದಾಗಿ ಸೇತುವೆ ಕಾಮಗಾರಿ ವಿಳಂಬವಾಗಿದೆ. ಇಂದು
ಸಂಬಂಧಪಟ್ಟ ಗುತ್ತಿಗೆದಾರರಿಗೆ, ಇಂಜಿನಿಯರ್ ಅವರಿಗೆ ಸೇತುವೆ ಕಾಮಗಾರಿ ಶೀಘ್ರ
ಮುಗಿಸಲು ಸೂಚಿಸಿದ್ದೇನೆ ಎಂದರು.
ಪಪಂ ಅಧ್ಯಕ್ಷೆ ಜುಬೇದ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ, ಸದಸ್ಯ ವಾಸಿಂ,
ಯುವ ಮುಖಂಡ ದೇವಂತರಾಜ್, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್,
ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ, ಕೆಆರ್‌ಡಿಸಿಎಲ್ ವ್ಯವಸ್ಥಾಪಕ
ನಿರ್ದೇಶಕ ಲಿಂಗಮೂರ್ತಿ, ಗಣೇಶ್, ಶ್ರೀಧರ್, ದಿನೇಶ್ ಇದ್ದರು.