ಜಿಲ್ಲೆ

ಬಾಕಿಯಿರುವ ಕಾಮಗಾರಿ ಆದ್ಯತೆ ಮೇಲೆ ಪೂರ್ಣಗೊಳಿಸಿ

ಗಿರೀಶ ಸಗರ

ವಿಜಯಪುರ:ನಗರ ಹೊರ ವಲಯದ ಬುರಣಾಪುರದಲ್ಲಿ ರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಮಾನದ ನಿಲ್ದಾಣದ ರ್ಟಮಿನಲ್​ ಕಟ್ಟಡ, ಎಟಿಸಿ ಕಟ್ಟಡ, ಏಫ್ರೋನ್​, ಐಸೋಲೇಶನ್​ ಬೇ, ರನ್​ವೇ ಮಾರ್ಗ ಸೇರಿದಂತೆ ಇತರೆ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.

ವಿಮಾನದ ನಿಲ್ದಾಣದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಇರುವ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಬೇಕು. ಬಾಕಿ ಇರುವ ಅಡೆ&ತಡೆಗಳನ್ನು ನಿವಾರಿಸಿಕೊಂಡು ಶ್ರೀ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ವಿಮಾನ ನಿಲ್ದಾಣದ ಕಾರ್ಯಾಚರಣೆಗಾಗಿ ಬಾಕಿ ಇರುವ ಪರಿಸರ ನಿರಾೇಪಣಾ ಪತ್ರ ಹಾಗೂ ಅಗ್ನಿಶಾಮಕ ವ್ಯವಸ್ಥೆ ಪ್ರಕ್ರಿಯೆ ಅನುಮತಿ ಬಾಕಿ ಇದ್ದು, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ತ್ವರಿತವಾಗಿ ಡಿಜಿಸಿಎ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿವೀಕ್ಷಣೆ ಮಾಡಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಸಿ.ಎಸ್​. ಪೊಲೀಸ್​ಪಾಟೀಲ, ಜಲಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ಗೋವಿಂದ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಮೋದ ಹೊಟ್ಟಿ, ರೇವಣ್ಣ ಮಸಳಿ ಮತ್ತಿತರರಿದ್ದರು.