ಸ್ಲಂ ನಿವಾಸಿಗಳ ಮನೆ ನಿರ್ಮಾಣ ಕಾರ್ಯವನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಮುಂದೆ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ವೇದಿಕೆ ಅಧ್ಯಕ್ಷ ಜನಾರ್ದನ ಹಳ್ಳಿಬೆಂಚಿ, ಪದಾಕಾರಿಗಳಾದ ಬಸವರಾಜ ಹೊಸೂರು, ನೂರ್‌ಜಹಾನ್, ನರಸಮ್ಮ, ಪುಷ್ಪಾ, ಹುಲಿಗೆಮ್ಮ, ಶಶಿಯಮ್ಮ, ಚನ್ನಮ್ಮ, ಸಾಕಮ್ಮ, ಲಕ್ಷ್ಮಿ, ಸಣ್ಣ ಶಂಕ್ರಮ್ಮ, ಸುಮಂಗಲಾ ಇದ್ದರು. 
ಜಿಲ್ಲೆ

ಮನೆ ನಿರ್ಮಾಣ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ

ರಾಚಯ್ಯ ಸ್ವಾಮಿ

ರಾಯಚೂರು: ನಗರದ ವಿವಿಧ ಬಡಾವಣೆಗಳಲ್ಲಿ ಸ್ವಂ ನಿವಾಸಿಗಳಿಗಾಗಿ ಮಂಜೂರಾಗಿರುವ ಮನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಪಿಎಂವೈ ಯೋಜನೆಯಡಿ 2018-19ನೇ ಸಾಲಿನಲ್ಲಿ ಮಂಜೂರಾದ 500 ಮನೆಗಳು ಹಾಗೂ 7 ಮತ್ತು 8ನೇ ಹಂತದಲ್ಲಿ ಮಂಜೂರಾದ 2,770 ಮನೆಗಳ ನಿರ್ಮಾಣ ಕಾರ್ಯ ಕುಂಟುತ್ತಾ ಸಾಗಿದೆ ಎಂದು ದೂರಿದರು.
ಐದು ವರ್ಷ ಕಳೆದರೂ ಗುತ್ತಿಗೆದಾರರು ಮನೆ ನಿರ್ಮಾಣ ಪೂರ್ಣಗೊಳಿಸುತ್ತಿಲ್ಲ. ಇದರಿಂದ ಲಾನುಭವಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಆದರೆ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಂಡಿದೆ ಎಂದು ಬಿಲ್ ಎತ್ತುವಳಿ ಮಾಡಿದ್ದಾರೆ. ಲಾನುಭವಿಗಳಿಗೆ ಕಾಮಗಾರಿ ಮುಗಿಯುವವರೆಗೆ ಪರ್ಯಾಯ ಶೆಡ್ ನಿರ್ಮಾಣ ಮಾಡಬೇಕು ಎನ್ನುವ ನಿಯಮ ಉಲ್ಲಂಘನೆ ಮಾಡಿದ್ದಾರೆ.
ಶೀಘ್ರ ಕಾಮಗಾರಿ ಮುಗಿಸುವಂತೆ ಕೇಳುವ ಲಾನುಭವಿಗಳಿಗೆ ಬೆದರಿಕೆ ಒಡ್ಡಲಾಗುತ್ತಿದೆ. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಇಲ್ಲವಾದಲ್ಲಿ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಜನಾರ್ದನ ಹಳ್ಳಿಬೆಂಚಿ, ಪದಾಕಾರಿಗಳಾದ ಬಸವರಾಜ ಹೊಸೂರು, ನೂರ್‌ಜಹಾನ್, ನರಸಮ್ಮ, ಪುಷ್ಪಾ, ಹುಲಿಗೆಮ್ಮ, ಶಶಿಯಮ್ಮ, ಚನ್ನಮ್ಮ, ಸಾಕಮ್ಮ, ಲಕ್ಷ್ಮಿ, ಸಣ್ಣ ಶಂಕ್ರಮ್ಮ, ಸುಮಂಗಲಾ ಪಾಲ್ಗೊಂಡಿದ್ದರು.