ವಿಕಲಚೇತನರ ಸಮುದಾಯ ಭವನ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಕರ್ನಾಟಕ ರಾಜ್ಯ ಅಂಗವಿಕಲರ ಮತ್ತು ಪಾಲಕರ ಒಕ್ಕೂಟದಿಂದ ಬುಧವಾರ ಮನವಿ ಸಲ್ಲಿಸಲಾಯಿತು. ಒಕ್ಕೂಟದ ಅಧ್ಯಕ್ಷ ಹೊನ್ನಪ್ಪ ಗೂಳಪ್ಪನವರ, ಪದಾಕಾರಿಗಳಾದ ಈರೇಶ, ಧರ್ಮರೆಡ್ಡಿ, ಹನುಮಂತು, ನಾಗರಾಜ, ಆಂಜಿನಯ್ಯ, ನರಸಿಂಹಲು, ರಾಜಪ್ಪ, ಕೃಷ್ಣ ಅಸ್ಕಿಹಾಳ ಇದ್ದರು. 
ಜಿಲ್ಲೆ

ವಿಕಲಚೇತನರ ಸಮುದಾಯ ಭವನ ಪೂರ್ಣಗೊಳಿಸಿ

ರಾಚಯ್ಯ ಸ್ವಾಮಿ

ರಾಯಚೂರು: ನಗರದ ವಾರ್ಡ್ ಸಂಖ್ಯೆ 24ರ‌್ಲಲಿ ವಿಕಲಚೇತನರ ಶೇ.5ರ ಅನುದಾನದಡಿ ನಿರ್ಮಾಣ ಮಾಡುತ್ತಿರುವ ಸಮುದಾಯ ಭವನ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಒತ್ತಾಯಿಸಿದೆ.
ಒಕ್ಕೂಟದ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಬುಧವಾರ ಮನವಿ ಸಲ್ಲಿಸಿ, 2015-16ನೇ ಸಾಲಿನಿಂದ ಇಲ್ಲಿಯವರೆಗೆ ಒಟ್ಟು 38.95 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದ್ದರೂ ಕಾಮಗಾರಿ ಅಪೂರ್ಣಗೊಂಡಿದೆ ಎಂದರು ದೂರಿದರು.
ಕಾಮಗಾರಿ ಪೂರ್ಣಗೊಳಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರು ಅಕಾರಿಗಳು ಕ್ರಮಕೈಗೊಂಡಿಲ್ಲ. ಕೂಡಲೇ ಕಾಮಗಾರಿಗೆ ಸಂಬಂಸಿದ ಖರ್ಚು ವೆಚ್ಚಗಳ ಪರಿಶೀಲನೆ ನಡೆಸಿ ಅರ್ಧಕ್ಕೆ ನಿಂತಿರುವ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸಬೇಕು. ಈ ಬಾರಿಯ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಸಮುದಾಯದಲ್ಲಿ ಆಚರಣೆಗೆ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘದ ಒಕ್ಕೂಟದ ಅಧ್ಯಕ್ಷ ಹೊನ್ನಪ್ಪ ಗೂಳಪ್ಪನವರ, ಪದಾಕಾರಿಗಳಾದ ಈರೇಶ, ಧರ್ಮರೆಡ್ಡಿ, ಹನುಮಂತು, ನಾಗರಾಜ, ಆಂಜಿನಯ್ಯ, ನರಸಿಂಹಲು, ರಾಜಪ್ಪ, ಕೃಷ್ಣ ಅಸ್ಕಿಹಾಳ ಇದ್ದರು.