ಜಿಲ್ಲೆ

ಕುಂದು ಕೊರತೆ ಸಭೆ, ತಡವಾಗಿ ಬಂದ ಅಧಿಕಾರಿಗಳ ಧೋರಣೆಗೆ ಹೊರ ನಡೆದ ಜನರು

ಚಿಕ್ಕಬಳ್ಳಾಪುರ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಲು ಕರೆಯಲಾಗಿದ್ದ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆಯು ಎರಡನೇ ಬಾರಿ ಕೂಡ ಬಹಿಷ್ಕಾರದಿಂದ ಮುಂದೂಡಲ್ಟಟ್ಟಿದೆ. ಚಿಕ್ಕಬಳ್ಳಾಪುರ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಬುಧವಾರ ಸಭೆ ಕೈಗೊಳ್ಳಲಾಗಿತ್ತು. ಆದರೆ, ಸಕಾಲಕ್ಕೆ ಎಸ್ಪಿ, ಡಿವೈಎಸ್ಪಿ ಸೇರಿ ಪ್ರಮುಖ ಅಧಿಕಾರಿಗಳು ಬರಲಿಲ್ಲ. ಇದರಿಂದ ದಲಿತ ಮುಖಂಡರು ಸಭೆ ಬಹಿಷ್ಕರಿಸಿ ಹೊರ ನಡೆದರು. ಇದರ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಬಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಕುಶಾಲ್ ಚೌಕ್ಸೆ ಸ್ಥಳದಲ್ಲಿದ್ದ ಬೆರಳೆಣಿಕೆಯ ಜನರಿಂದ ಅಹವಾಲು ಸ್ವೀಕರಿಸಿದರು.
ಮೊದಲು ಸೆ.೨೦ ಕ್ಕೆ ಸಭೆ ನಿಗದಿಯಾಗಿತ್ತು. ಆಗ ಜನರ ಕೊರತೆಯಿಂದ ಎಲ್ಲರ ಅಭಿಪ್ರಾಯದಂತೆ ಸೆ.೨೩ ಕ್ಕೆ ಮುಂದೂಡಲಾಗಿತ್ತು. ಮಧ್ಯಾಹ್ನ ೩ ಕ್ಕೆ ಎಡಿಜಿಪಿ ತುರ್ತು ಭೇಟಿ ಹಿನ್ನೆಲೆಯಲ್ಲಿ ಒಂದು ಗಂಟೆ ತಡವಾಗಿ ಆರಂಭಿಸಲಾಗಿದೆ. ಇದನ್ನೇ ದೊಡ್ಡದು ಮಾಡಿಕೊಂಡು ಕೆಲವರು ಸಭೆಯಿಂದ ಹೊರ ನಡೆದಿದ್ದಾರೆ. ಇದರ ನಡುವೆಯೂ ಅಹವಾಲು ಆಲಿಸಲಾಗಿದೆ. ಜಿಲ್ಲಾ ಪೊಲಿಸ್  ಇಲಾಖೆಯ ಬಾಗಿಲು ಸದಾ ತೆರೆದಿರಲಾಗುತ್ತದೆ. ಜನರು ಬಂದು ಅರ್ಜಿಗಳನ್ನು ಸಲ್ಲಿಸಿ, ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

*ದಲಿತ ಮುಖಂಡರ ಬಹಿಷ್ಕಾರ
ಜಿಲ್ಲಾ ಪೊಲೀಸ್ ಠಾಣೆಗಳಲ್ಲಿ ದಲಿತರ ಮೇಲೆ ದಾಖಲಾಗಿರುವ ಸುಳ್ಳು ಕೇಸುಗಳನ್ನು ಕೈಬಿಡಬೇಕು. ಕಾಲ ಕಾಲಕ್ಕೆ ದಲಿತರ ಕುಂದುಕೊರತೆ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಬೇಕು. ಆದರೆ, ಇದು ಜಿಲ್ಲೆಯ ಸರ್ಮಪಕವಾಗಿ ನಡೆಯುತ್ತಿಲ್ಲ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ಗ್ರಾಮಗಳಲ್ಲಿ ಗಸ್ತು ಸಭೆಗಳು ನಿಂತು ಹೋಗಿವೆ. ಈಗಲಾದರೂ ಚುರುಕುಗೊಳಿಸಬೇಕು. ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಸಭೆಗಳು ಸರಿಯಾಗಿ ನಡೆಯುತ್ತಿಲ್ಲ. ಪ್ರಕರಣ ದಾಖಲಿಸದೇ ಹಣ ಪಡೆಯಲಾಗುತ್ತಿದೆ. ದೂರು ದಾಖಲಿಸಲು ಹೋದರೆ ಪ್ರತಿ ದೂರು ದಾಖಲಿಸುತ್ತಿದ್ದಾರೆ ಎಂದು ದೂರಿದ್ದಾರೆ.