ರಾಣೆಬೆನ್ನೂರ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಅವರಿಂದ ವಾಹನ, 13.50 ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡ ಘಟನೆ ಇಲ್ಲಿಯ ಜಾನುವಾರು ಮಾರುಕಟ್ಟೆ ಬಳಿ ಭಾನುವಾರ ರಾತ್ರಿ ನಡೆದಿದೆ.
ತಾಲೂಕಿನ ಇಟಗಿ ಗ್ರಾಮದ ಗುರುರಾಜ ಶೇಖಪ್ಪ ಉಪ್ಪಿನ, ಶರಣ ಶಂಕರಪ್ಪ ಓಲೇಕಾರ ಹಾಗೂ ಕನಕದಾಸ ನಗರದ ಮಂಜುನಾಥ ಗುಡ್ಡಪ್ಪ ಜಕ್ಕಪ್ಪನವರ ಬಂಧಿತ ಆರೋಪಿಗಳು.
ಇವರು ನಗರದ ವಿವಿಧೆಡೆ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿಕೊಂಡು ಮಾರಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಆಹಾರ ನಿರೀಕ್ಷಕ ಸ್ವೀವನ್ ಅಂಗಡಿ ಮೂವರನ್ನು ಬಂಧಿಸಿ, ಪಡಿತರ ಅಕ್ಕಿ ಹಾಗೂ ಒಂದು ಅಶೋಕ ಲೈಲ್ಯಾಂಡ್ ಟಾಟಾಎಸಿ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.