Oplus_0 
ಜಿಲ್ಲೆ

ರಮೇಶ್ ಕತ್ತಿ ವಿರುದ್ಧ ದೂರು ದಾಖಲು

ಯಳಂದೂರು: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಾನವ ಬಂಧುತ್ವ ವೇದಿಕೆಯ ಯಳಂದೂರು ಶಾಖೆಯ ವತಿಯಿಂದ ಬೆಳಗಾವಿಯಲ್ಲಿ ದಲಿತ ವಾಲ್ಮೀಕಿ ಸಮಾಜಕ್ಕೆ ಜಾತಿ ನಿಂದನೆ ಮಾಡಿರುವ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ದೂರು ದಾಖಲಿಸುವಂತೆ ಗುರುವಾರ ಮನವಿ ಮಾಡಲಾಯಿತು.

ವಾಲ್ಮೀಕಿ ಸಮುದಾಯದ ಕುರಿತು ಮಾಜಿ ಸಂಸದ ರಮೇಶ ಕತ್ತಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇದರಿಂದ ಸಮಾಜದ ಜನರಿಗೆ ಇದು ನೋವನ್ನುಂಟು ಮಾಡಿದೆ. ಶೀಘ್ರ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪೊಲೀಸ್ ಠಾಣೆಯ ಎಎಸ್‌ಐ ರಾಜೀವ್ ಪ್ರಕರಣವನ್ನು ದಾಖಲಿಸಬೇಕೆಂದು ಆಗ್ರಹಿಸಿ ಮನವಿ ಪತ್ರವನ್ನು ಮಾನವ ಬಂಧುತ್ವ ಸಂಚಾಲಕ ಎಸ್.ಸುಂದರಕಲಿವೀರ್, ಪ.ಪಂ. ಮಾಜಿ ಸದಸ್ಯ ಉಮಾಶಂಕರ್ ಸಲ್ಲಿಸಿದರು.