ಜಿಲ್ಲೆ

ಡಿಜೆ ಹಚ್ಚಿದ್ದರಿಂದ ಭಜರಂಗದಳದವರ ವಿರುದ್ಧ ದೂರು ದಾಖಲು

Haveri - Kariyappa Aralikatti

ರಾಣೆಬೆನ್ನೂರ: ಇಲ್ಲಿಯ ಸಂಗಮ್​ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿಶ್ವ ಹಿಂದು ಪರಿಷತ್​, ಭಜರಂಗದಳದ ಗಣಪತಿ ವಿಸರ್ಜನೆ ಸಮಯದಲ್ಲಿ ಡಿಜೆ ಹಚ್ಚಿದ ಆರೋಪದಡಿ ಮೂವರ ವಿರುದ್ಧ ಶಹರ ಪೊಲೀಸ್​ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ಗಣೇಶ ಮಂಡಳಿ ಅಧ್ಯಕ್ಷ ಅಜಯ ಮಠದ, ಬೆಳಗಾವಿಯ ಎಸ್​.ಕೆ. ಗಾಡಿ ಸೌಂಡ್​ ಸಿಸ್ಟ್​ಂ ಮಾಲೀಕ ಸಾಯಿಶ್​ ಸಾ, ಬ್ಯಾಡಗಿಯ ಮಂಜುಳಾ ಸೌಂಡ್​ ಸಿಸ್ಟಂ ಮಾಲೀಕನ ವಿರುದ್ಧ ದೂರು ದಾಖಲಾಗಿರುವುದು.

ಇವರು ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ನಿಯಮ ಉಲ್ಲಂಘಿಸಿ ಡಿಜೆ ಹಚ್ಚಿಕೊಂಡು ತೆರಳಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.