ಮೈಸೂರು: ರಾಜ್ಯಪಾಲರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರುವ ಎಂಎಲ್‌ಸಿ ಐವಾನ್ ಡಿಸೋಜ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮೈಸೂರು ನಗರ ಜಿಲ್ಲಾ ಯುವ ಮೋರ್ಚಾದಿಂದ ಉಪ ಪೊಲೀಸ್ ಆಯುಕ್ತೆ ಜಾನ್ಹವಿ ಅವರಿಗೆ ದೂರು ನೀಡಲಾಯಿತು.
ಐವನ್ ಡಿಸೋಜಾ ಅವರು, ರಾಜಭವನದ ಮೇಲೆ ಬಾಂಗ್ಲಾ ಮಾದರಿ ದಾಳಿ ಮಾಡುವುದಾಗಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಇಂತಹ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಡಿಸೋಜ ಅವರು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮೈಸೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರಿಧರ್, ನಗರ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ರಾಜ್ಯ ಯೋಜನಾ ಹಾಗೂ ಸಂಶೋಧನೆಯ ಸಂಚಾಲಕ ಪ್ರಣಯ್, ನಗರ ಉಪಾಧ್ಯಕ್ಷ ಜೋಗಿ ಮಂಜು, ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಿ ಲೋಹೀತ್, ಉಪಾಧ್ಯಕ್ಷ ಮನು ಅಪ್ಪಿ, ಮಂಡಲ ಅಧ್ಯಕ್ಷರಾದ ಅರ್ಜುನ್, ನವೀನ್, ಪದಾಧಿಕಾರಗಳಾದ ಕಿರಣ್, ನಾಯ್ಡು, ಶಂಕರ್, ಲಿಖಿತ್, ಸಾಗರ್ ಚೇತನ್, ಮನೋಹರ್ ಇತರರು ಇದ್ದರು.