Complaint concept. Claim petition. Man hold clipboard in hand wrote a complaint. Flat design, vector illustration on green background 
ಜಿಲ್ಲೆ

ಯೂಟ್ಯೂಬರ್​ ವಿರುದ್ಧ ದೂರು

ಕೋಲಾರ ಡೆಸ್ಕ್

ಕೋಲಾರ: ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕ ದಾಳಿ ಉಲ್ಲೇಖಿಸಿ, ಯೂಟ್ಯೂಬ್​ ಚಾನಲ್​ನಲ್ಲಿ, ಇದೊಂದು ಕೇಂದ್ರ ಸರ್ಕಾರದ ಪೂರ್ವ ನಿಯೋಜಿತ ದಾಳಿ ಎಂದು ಹೇಳಿಕೆ ನೀಡಿದ್ದ ಆರೋಪಿಯ ವಿರುದ್ಧ ಗಲ್​ಪೇಟೆ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ.

ನಗರದ ಕುಂಬಾರಪೇಟೆಯ ಮುನೀರ್​ ಖಾನ್​ ಖುರೇಷಿ (43) ಎಂಬಾತ ತನ್ನ ಯೂಟ್ಯೂಬ್​ ಚಾನಲ್​ನಲ್ಲಿ ದಾಳಿ ಬಗ್ಗೆ ಸುದ್ದಿ ಹರಿಬಿಟ್ಟು, ಬಿಹಾರದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಹಿಂದು ಮತ ಬ್ಯಾಂಕ್​ ಭದ್ರಪಡಿಸಿಕೊಳ್ಳುವ ಉದ್ದೇಶದಿಂದ ಇಂತಹ ಕೃತ್ಯ ಮಾಡಿಸಿದ್ದಾರೆ ಎಂದು ಆಧಾರರಹಿತವಾಗಿ ಸುಳ್ಳುಸುದ್ದಿ ಹಬ್ಬಿಸಿದ್ದ.

ಸಾರ್ವಜನಿಕರಲ್ಲಿ ಅಶಾಂತಿ ಮತ್ತು ಕೋಮು ಸಹಿಷ್ಣುತೆಗೆ ಧಕ್ಕೆ ಉಂಟು ಮಾಡಿದ್ದಾರೆ. ಆದ್ದರಿಂದ ಮುನೀರ್​ ವಿರುದ್ಧ ಗಲ್​ಪೇಟೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್​ ಇಲಾಖೆ ತಿಳಿಸಿದೆ.