ಮೈಸೂರು: ವೈದ್ಯಕೀಯ ಉಪಕರಣಗಳ ಮಾರಾಟದಿಂದ ಬಂದ ಹಣವನ್ನು ಕಂಪನಿಗೆ ಪಾವತಿಸದೆ ಸ್ವಂತಕ್ಕೆ ಬಳಸಿಕೊಂಡ ಆರೋಪದಡಿ ಇಬ್ಬರು ಉದ್ಯೋಗಿಗಳ ವಿರುದ್ಧ ನಗರದ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಲಕ್ಷ್ಮೀಪುರಂನಲ್ಲಿರುವ ಚೆನ್ನೈ ಮೂಲದ ಜೆಸ್ಕೋ ಹೆಲ್ತ್ಕೇರ್ ಕಂಪನಿಯ ಕಚೇರಿಯ ಮಾರಾಟ ಪ್ರತಿನಿಧಿ ಮೊಹಮದ್ ಜಕ್ರಿಯಾ ಷರೀಫ್ ಹಾಗೂ ಕಚೇರಿ ಉಸ್ತುವಾರಿ ಸುನಿತಾ ವಿರುದ್ಧ ಕಂಪನಿಯ ವ್ಯವಸ್ಥಾಪಕ ಕೃಷ್ಣ ಕುಮಾರ್ ದೂರು ನೀಡಿದ್ದಾರೆ.
ವೈದ್ಯಕೀಯ ಉಪಕರಣಗಳನ್ನು ವೈದ್ಯರು ಹಾಗೂ ಮೆಡಿಕಲ್ ಸ್ಟೋರ್‌ಗೆ ಮಾರಾಟ ಮಾಡಿದ್ದಾರೆ. ಆದರೆ ಮಾರಾಟದಿಂದ ಬಂದ 9.79 ಲಕ್ಷ ರೂ.ಗಳನ್ನು ಕಂಪನಿಯ ಖಾತೆಗೆ ಪಾವತಿಸದೆ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.