ಜಿಲ್ಲೆ

ಮುಕ್ತ ವಿವಿ ಕುಲಪತಿ ಶರಣಪ್ಪ ವಿ.ಹಲಸೆ ವಿರುದ್ಧ ದೂರು

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ 180ನೇ ಸಭೆಗೆ ಮಂಡಿಸದ ವಿಷಯಕ್ಕೆ ಕುಲಪತಿ ಮತ್ತು ಕುಲಸಚಿವರು ಸುಳ್ಳು ನಡಾವಳಿ ಸೃಷ್ಟಿಸಿ, ಅಧಿಕಾರ ದುರ್ಬಳಕೆ ಮಾಡಿಕೊಂಡು ಕೆಲವು ಶಿಕ್ಷಕರಿಗೆ ಪೂರ್ವಾನ್ವಯವಾಗಿ ಪದೋನ್ನತಿ ನೀಡಿ ಲಕ್ಷಾಂತರ ರೂ. ವೇತನ ಬಾಕಿ ಪಾವತಿಸಿದ್ದಾರೆ ಎಂದು ಅಮಾನತುಗೊಂಡಿರುವ ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಕೆ. ಜಗದೀಶ್ ಬಾಬು ಆರೋಪಿಸಿದರು.

ಅಂದಿನ ಸಭೆಗೆ ಗೈರು ಹಾಜರಾದ ವ್ಯವಸ್ಥಾಪನಾ ಮಂಡಳಿ ಸದಸ್ಯರೂ ಆಗಿರುವ ಶಾಸಕರಾದ ಕೆ.ಹರೀಶ್ ಗೌಡ, ಡಿ.ರವಿಶಂಕರ್ ಹಾಗೂ ವಿಧಾನಪರಿಷತ್ ಸದಸ್ಯ ಡಾ.ಬಿ.ಜಿ.ಪಾಟೀಲ್ ಸಭೆಯಲ್ಲಿ ಭಾಗವಹಿಸಿದ್ದರು ಎಂದುನಡಾವಳಿಯಲ್ಲಿ ಸೇರಿಸಿ ಜನಪ್ರತಿನಿಧಿಗಳಿಗೂ ವಂಚಿಸಿದ್ದಾರೆ. ಈ ಬಗ್ಗೆ ಕುಲಪತಿ ಡಾ.ಶರಣಪ್ಪ ವಿ.ಹಲಸೆ, ಕುಲಸಚಿವ ಡಾ.ಕೆ.ಬಿ.ಪ್ರವೀಣ, ಶೈಕ್ಷಣಿಕ ಡೀನ್ ಡಾ. ಲಕ್ಷ್ಮೀ, ಉಪ ಕುಲಸಚಿವ (ಪ್ರಾಧಿಕಾರ) ಎಸ್.ಎಂ. ಚಂದ್ರಶೇಖರ್, ಪ್ರಾಧ್ಯಾಪಕ ಡಾ.ಎಸ್. ನಿರಂಜನ್ ವಿರುದ್ಧ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.