ಜಿಲ್ಲೆ

ಗಿರೀಶ ಮಟ್ಟೆಣ್ಣವರ, ಕುಡ್ಲಾ ವಿರುದ್ಧ ದೂರು

ಮರಿದೇವ ಹೂಗಾರ

ಹುಬ್ಬಳ್ಳಿ: ಜೈನ ಧರ್ಮೀಯರ ವಿರುದ್ಧ ಅವಮಾನಕರವಾಗಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಗಿರೀಶ ಮಟ್ಟೆಣ್ಣವರ ಹಾಗೂ ಯೂಟ್ಯೂಬರ್ ಕುಡ್ಲಾ ರ‌್ಯಾಮ್ಪೇಜ್ ವಿರುದ್ಧ ಇಲ್ಲಿಯ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಛಬ್ಬಿ ಗ್ರಾಮದ ಅಜೀತ್ ಬಸಾಪುರ ಈ ಕುರಿತು ದೂರು ನೀಡಿದ್ದು, ಇನ್‌ಸ್ಪೆಕ್ಟರ್ ಎಂ.ಡಿ. ಪಾಟೀಲ್ ಜೀರೋ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ದಕ್ಷಿಣ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಆರೋಪಿ ಗಿರೀಶ ಮಟ್ಟೆಣ್ಣವರ ಅವರು, ಕುಡ್ಲಾ ರಾಮ್‌ಪೇಜ್ ಅವರ ಯೂಟ್ಯೂಬ್ ಚಾನಲ್‌ಗೆ ಸಂದರ್ಶನ ನೀಡುವಾಗ ಜೈನರು ಕ್ರೂರಿಗಳು. ದಬ್ಬಾಳಿಕೆ ಮಾಡುವವರು. ಮತಾಂಧರು ಎಂದು ಅಪಮಾನ ಮಾಡಿದ್ದಾರೆ. ಅದಕ್ಕೆ, ಯೂಟ್ಯೂಬರ್ ಕೂಡ ಅವಕಾಶ ಮಾಡಿಕೊಟ್ಟಿರುವುದು ನಮ್ಮ ಸಮುದಾಯದ ಭಾವನಗೆ ಧಕ್ಕೆ ತಂದಂತಾಗಿದೆ ಎಂದು ಅಜೀತ್ ಆ. 10ರಂದು ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.