ಜಿಲ್ಲೆ

ದಲಿತ ಮುಖಂಡರಿಂದ ಡಿಸಿ, ಎಸ್​ಪಿ, ಸಿಇಒ ವಿರುದ್ಧ ದೂರು

ಗಂಗಾಧರ ಬಿ ವಿ

ರಾಮನಗರ: ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ (ಎನ್​ಸಿಎಸ್​ಸಿ) ಸದಸ್ಯೆ ಡಾ. ಅಂಜುಬಾಲಾ ಅವರಿಗೆ ಅಗೌರವ ತೋರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್​ ಮೆನನ್​ ರಾಜೇಂದ್ರನ್​, ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿ ಕಾರ್ತಿಕ್​ರೆಡ್ಡಿ, ಜಿಪಂ ಸಿಇಒ ದಿಗ್ವಿಜಯ್​ ಬೋಡ್ಕೆ ಅವರ ವಿರುದ್ಧ ಪರಿಶಿಷ್ಟ ಜಾತಿ ಪ್ರತಿಬಂಧಕ ಕಾಯ್ದೆ 2015, 16ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಲಿತ ಮುಖಂಡ ಶಿವಕುಮಾರಸ್ವಾಮಿ ಅವರು ಪುರ ಠಾಣೆಗೆ ಲಿಖಿತ ದೂರು ದಾಖಲಿಸಿದ್ದಾರೆ.

ಎನ್​ಸಿಎಸ್​ಸಿ ಸದಸ್ಯೆ ಡಾ. ಅಂಜುಬಾಲಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಿಗಧಿಯಾಗಿತ್ತು. ಅಧ್ಯಕ್ಷರು ಪರಿಶಿಷ್ಟ ಜಾತಿಯವರು ಎಂಬ ದುರುದ್ದೇಶದಿಂದ ಅವರನ್ನು ಸ್ವಾಗತಿಸದೆ ಸಾಮಾಜಿಕವಾಗಿ ಅವಮಾನ ಮಾಡಿದ್ದಾರೆ. ಸಂವಿಧಾನ ಬದ್ಧವಾಗಿ ಇರುವ ಹಕ್ಕು ಅಧಿಕಾರಕ್ಕೆ ಚ್ಯುತಿ ತಂದಿದ್ದಾರೆ.

ಜಿಲ್ಲೆಯಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ತಿಳಿಸಲು ಹೋಗಲು ಬಿಡದೆ ಜಿಪಂ ಸಿಇಒ ಅವರು ತಡೆದು ಅವಮಾನ ಮಾಡಿರುತ್ತಾರೆ ಹಾಗೂ ಜತೆಗೆ ಸಭೆ ಮಾಡಲು ಸ್ಥಳ ನೀಡದೆ ಸದಸ್ಯರಿಗೆ ಅವಮಾನ ಮಾಡಿರುತ್ತಾರೆ ಎಂದು ಆರೋಪಿಸಿದರು. ಇದರ ಕುರಿತು ಸಿಇಒ ಬಳಿ ಕೇಳಲು ಹೋದಾಗ ಎಸ್​ಪಿ ಕಾರ್ತಿಕ್​ ರೆಡ್ಡಿ ಏರು ಧ್ವನಿಯಲ್ಲಿ ಗದರಿದ್ದಲ್ಲದೆ ಸಾಮಾಜಿಕವಾಗಿ ಬಹಿಷ್ಕಾರಕ್ಕೆ ಒಳಪಡಿಸಿದರು. ಮೂವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರು ದೂರಿನಲ್ಲಿ ತಿಳಿಸಿದ್ದಾರೆ..