ಗದಗ ತಾಲೂಕಿನ ಚಿಕೇನಕೊಪ್ಪ ಗ್ರಾಮದ ಚನ್ನವಿರ ಶರಣರ ಕಲಾ, ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಸ್ಪರ್ಧಾ ಪರೀೆಯ ಪೂರ್ವ ತರಬೇತಿ ಕಾರ್ಯಕ್ರಮವನ್ನು ಸಿದ್ದಣ್ಣ ದಳವಾತಿ ಮತ್ತು ಚಿಕೇನಕೊಪ್ಪ ಶ್ರೀಗಳು ಉದ್ಘಾಟಿಸಿದರು. ಈಶ್ವರ ಹೂಗಾರ, ತೇಜಸ್ವಿನಿ ಮಂದಾಲಿ, ಎಂ. ಜಿ. ಪಾತ್ರೋಟ, ಎಂ.ಜಿ. ಹಿರೇಮಠ ಇದ್ದರು. 
ಜಿಲ್ಲೆ

ಆತ್ಮವಿಶ್ವಾಸ ಹಾಗೂ ಪ್ರಯತ್ನದಿಂದ ಯಶಸ್ವಿಯಾಗಬಹುದು:ಸಿದ್ದಣ್ಣ ದಳವಾಯಿ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಆತ್ಮವಿಶ್ವಾಸ ಮತ್ತು ಪ್ರಯತ್ನವಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಬಹುದು ಎಂದು ಶಿಕ್ಷಣ ತಜ್ಞ ಸಿದ್ದಣ್ಣ ದಳವಾಯಿ ಹೇಳಿದರು.
ತಾಲೂಕಿನ ಚಿಕೇನಕೊಪ್ಪ ಚನ್ನವಿರ ಶರಣರ ಕಲಾ, ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಸಭಾಮಂದಿರದಲ್ಲಿ ಮಂಗಳವಾರ ಜರುಗಿದ ಎಸ್​ಎಸ್​ಎಲ್​ಸಿ, ಪಿಯುಸಿ ಮತ್ತು ಐಟಿಐ ವಿದ್ಯಾಥಿರ್ಗಳಿಗೆ ಏರ್ಪಡಿಸಿದ ಸ್ಪರ್ಧಾ ಪರೀಕ್ಷೆಯ ಪೂರ್ವ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತಮಾಡಿದರು.
ಸ್ಪರ್ಧಾ ಪರೀೆ ಎಂದರೆ ವಿದ್ಯಾಥಿರ್ಗಳು ಕಠಿಣವೆನ್ನುತ್ತಾರೆ. ಆದರೆ, ಹದವರಿತ ವಿದ್ಯಾಥಿರ್ಯ ಉತ್ತಮ ಅಧ್ಯಯನದ ಮೂಲಕ ಯಶಸ್ಸು ಪಡೆಯಲು ಸಾಧ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ಶಾಂತವೀರ ಶರಣರು ಮಾತನಾಡಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ತಿಳಿಸಲು ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಹುಪಾಲು ಬಡತನದ ಜೀವನ ಸಾಗಿಸುವ ವಿದ್ಯಾಥಿರ್ಗಳಿಗೆ ಅನುಕೂಲ ಆಗಲೆಂದು ಈ ತರಬೇತಿಯನ್ನು ಕಳೆದ ಮೂರು ವರ್ಷಗಳಿಂದ ನಡೆಸುತ್ತ ಬರಲಾಗಿದೆ. ಅನೇಕ ಸಂಪನ್ಮೂಲ ವ್ಯಕ್ತಿಗಳ ಕಾಲೇಜಿನ ಉಪನ್ಯಾಸಕರ ಮಾರ್ಗದರ್ಶನ ಪಡೆದು ಇದರ ಸದುಪಯೋಗವನ್ನು ಪಡೆಯುವಂತೆ ವಿದ್ಯಾಥಿರ್ಗಳಿಗೆ ಕರೆ ನೀಡಿದರು.
ಶಿಣ ಸಂಯೋಜಕ ಎಚ್​. ಬಿ. ಯಲಬುಗಿರ್ ಮಾತನಾಡಿ, ವಿದ್ಯಾಥಿರ್ ಜೀವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ಪಡೆಯುವುದು ಅವಶ್ಯವಿದೆ. ಸಾಧನೆ, ಸಾಧಕನ ಸೊತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಶ್ರೀಗಳ ಕನಸಿನ ಕುಸಾದ ಈ ತರಬೇತಿಯನ್ನು ವಿದ್ಯಾಪಿಠದ ಪದಾಧಿಕಾರಿಗಳು, ಸಿಬ್ಬಂದಿಯವರು ಪಾಲಕರು, ವಿದ್ಯಾಥಿರ್ಗಳು ತುಂಬಾ ಮೆಚ್ಚಿಕೊಂಡಿದ್ದಾರೆ. ಇದರ ಪರಿಣಾಮವೇ ನಮ್ಮ ಕಾಲೇಜಿನಲ್ಲಿ ವರ್ಷದಿಂದ ವರ್ಷಕ್ಕೆ ಪ್ರವೇಶ ಪಡೆಯುವ ವಿದ್ಯಾಥಿರ್ಗಳ ಸಂಖ್ಯೆ ಹೆಚ್ಚುತ್ತಿರುವುದು ಹೆಮ್ಮೆಯ ಸಂಗತಿ ಎಂದರುಯಾಗಿದೆ.
ಎಂ. ಬಿ. ಸಿಕ್ಕೆದೇಸಾಯಿ ಅಧ್ಯತೆ ವಹಿಸಿದ್ದರು. ಈಶ್ವರ ಹೂಗಾರ, ತೇಜಸ್ವಿನಿ ಮಂದಾಲಿ, ಎಂ. ಜಿ. ಪಾತ್ರೋಟ, ಎಂ.ಜಿ. ಹಿರೇಮಠ, ಪ್ರಕಾಶ ಬರದೂರ, ಬಸವರಾಜ ಪೂಜಾರ ಇದ್ದರು.