ಕಾರ್ಕಳ: ವಿದ್ಯಾಮಾತಾ ಅಕಾಡೆಮಿ ಕಾರ್ಕಳ ಶಾಖೆ ವತಿಯಿಂದ ಸೇನೆ ಮತ್ತು ಅಗ್ನಿಪಥ್ ಸೇರುವ ಆಸಕ್ತ ಮಕ್ಕಳಿಗೆ ಉಚಿತ ತರಬೇತಿ, ಮಾಹಿತಿ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.
ಉಡುಪಿ, ದಕ್ಷಿಣ ಕನ್ನಡ, ಹಾಸನ ಜಿಲ್ಲೆಯಿಂದ ಐವತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಸರ್ಕಾರಿ ಸ್ವಾಮ್ಯದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ನೀಡಲಾಯಿತು.
ಕಾರ್ಕಳ ಶಾಖೆ ನಿರ್ದೇಶಕ ರಮಿತಾ ಶೈಲೇಂದ್ರ, ವಿದ್ಯಾಮಾತಾ ಫೌಂಡೇಶನ್ ಸ್ಥಾಪಕ ಭಾಗ್ಯೇಶ್ ರೈ, ಅಕಾಡೆಮಿ ಸುಳ್ಯ ಶಾಖೆ, ಕಾರ್ಕಳ ಶಾಖೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.