ಮಲ್ಲೇಶ್ವರದ ಹವ್ಯಕ ಭವನದಲ್ಲಿ ನಡೆದ ಪ್ರತಿಬಿಂಬ ಗ್ರ್ಯಾಂಡ್ ಫಿನಾಲೆ ಸವಾರೋಪವನ್ನು ಡಾ. ಗಿರಿಧರ ಕಜೆ ಉದ್ಘಾಟಿಸಿದರು. ಆನಂದ ಭಟ್, ಶ್ರೀಧರ ಜೆ. ಭಟ್ ಕೆಕ್ಕಾರು, ವೇಣುವ್ನಿೇಶ ಸಂಪ ಇತರರಿದ್ದರು. folder
ಜಿಲ್ಲೆ

ಸ್ಪರ್ಧೆ ಕ್ರೀಡಾ ಮನೋಭಾವ ಕಲಿಸುತ್ತದೆ

ಸ್ಪರ್ಧೆಯು ಕ್ರೀಡಾ ಮನೋಭಾವ ಹಾಗೂ ಸಂಭ್ರಮಿಸುವ ಮನಸ್ಥಿತಿಯನ್ನು ಕಲಿಸಿಕೊಡುತ್ತದೆ. ಅಸೂಯೆ ಜತೆಯಾಗಬಾರದು ಎಂದು ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ಹೇಳಿದ್ದಾರೆ.

ಬೆಂಗಳೂರು: ಸ್ಪರ್ಧೆಯು ಕ್ರೀಡಾ ಮನೋಭಾವ ಹಾಗೂ ಸಂಭ್ರಮಿಸುವ ಮನಸ್ಥಿತಿಯನ್ನು ಕಲಿಸಿಕೊಡುತ್ತದೆ. ಅಸೂಯೆ ಜತೆಯಾಗಬಾರದು ಎಂದು ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ಹೇಳಿದ್ದಾರೆ.

ಮಲ್ಲೇಶ್ವರದ ಹವ್ಯಕ ಭವನದಲ್ಲಿ ನಡೆದ ಪ್ರತಿಬಿಂಬ ಗ್ರ್ಯಾಂಡ್ ಫಿನಾಲೆ ಸಮಾರೋಪದಲ್ಲಿ ಮಾತನಾಡಿದರು. ಪ್ರತಿಬಿಂಬ ಸ್ಪರ್ಧಾ ಸೌರಭವನ್ನು 31 ವಷರ್ಗಳಿಂದ ರಾಜ್ಯ ಸೇರಿ ಹೊರ ರಾಜ್ಯಗಳಲ್ಲೂ 13 ಪ್ರಾಂತ್ಯಗಳಲ್ಲಿ ನಡೆಸಲಾಗುತ್ತಿದೆ ಎಂದರು.

ಅರಮನೆ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದಿನ ದಿನ ಮಾತೃ ಸಂಗಮ ಕಾರ್ಯಕ್ರಮ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು. 115 ಪ್ರಾಂತ್ಯಗಳಲ್ಲಿ ಹವ್ಯಕ ಮಹಿಳಾ ವೇದಿಕೆಗಳನ್ನು ಸಂಟಿಸಲಾಗಿದ್ದು, ಡಿ.20ರೊಳಗೆ ಹೊರರಾಜ್ಯ ಹೊರದೇಶಗಳಲ್ಲಿ 150 ಹವ್ಯಕ ಮಹಿಳಾ ವೇದಿಕೆಯನ್ನು ಉದ್ಘಾಟಿಸಲಾಗುವುದು. ಆ ಮೂಲಕ 2 ಸಾವಿರಕ್ಕೂ ಅಧಿಕ ಮಹಿಳಾ ಪದಾಧಿಕಾರಿಗಳು ಸವಾಜ ಸಂಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.

ಜಿಎಸ್‌ಟಿ ಉಪ ಆಯುಕ್ತೆ ಸಹನಾ ಬಾಳ್ಕಲ್ ವಾತನಾಡಿ, ಸ್ಪರ್ಧೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮನೋಬಲ ವೃದ್ಧಿಯಾಗುತ್ತದೆ. ಸಂಟನೆ , ಸ್ಪರ್ಧಾ ಮನೋಭಾವ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.

ಇಸ್ರೋ ನಿವೃತ್ತ ವಿಜ್ಞಾನಿ ಪಿ.ಜೆ. ಭಟ್ ಮಾತನಾಡಿ, ಹವ್ಯಕ ಮಹಾಸಭೆಯಿಂದ ಅನೇಕ ಸಂಟನಾತ್ಮಕ ಕಾರ್ಯಗಳು ನಡೆಯುತ್ತಿವೆ. ಕಳೆದ ಎರಡು ವಿಶ್ವ ಹವ್ಯಕ ಸಮ್ಮೇಳನಗಳು ಹವ್ಯಕ ಸವಾಜಕ್ಕೆ ನಾಡಿನಲ್ಲಿ ವಿಶೇಷ ವಾನ್ಯತೆ ತಂದು ಕೊಟ್ಟಿದೆ ಎಂದು ಅಭಿಪ್ರಾಯಪಟ್ಟರು.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಹುಬ್ಬಳ್ಳಿ, ಬೆಂಗಳೂರು, ಗೋವಾ, ಮುಂಬೈ ಜಿಲ್ಲೆಗಳ ವಿವಿಧ ಪ್ರಾಂತ್ಯಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.

ಮಹಾಸಭೆಯ ಉಪಾಧ್ಯಕ್ಷ ಶ್ರೀಧರ ಜೆ. ಭಟ್ ಕೆಕ್ಕಾರು, ಪ್ರಧಾನ ಕಾರ್ಯದರ್ಶಿ ಸಿ.ಎ. ವೇಣುವ್ನಿೇಶ ಸಂಪ, ಕಾರ್ಯದರ್ಶಿ ಪ್ರಶಾಂತ್‌ಕುವಾರ್ ಭಟ್ ಮಲವಳ್ಳಿ, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ, ಪ್ರತಿಬಿಂಬ ಸಂಚಾಲಕ ದೀಪಕ ಹೆಗಡೆ ಗೋಳಿಕೈ, ಮಹಿಳಾ ವೇದಿಕೆ ಸಂಚಾಲಕಿ ಮಧುರಾ ಗಾಂವ್ಕರ್, ಉದ್ಯಮಿ ಆನಂದ ಭಟ್ ಉಪಸ್ಥಿತರಿದ್ದರು.