ಕದರೀಪುರ: ವೇಮಗಲ್ ಹೋಬಳಿಯ ಮದ್ದೇರಿ ವಿವಿಧೋದ್ದೇಶ ಸಹಕಾರ ಸಂದ ಚುನಾವಣೆ ನಡೆದು 12 ನಿರ್ದೇಶಕ ಸ್ಥಾನಗಳಲ್ಲಿ 7 ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಅಂತೆಯೇ, ಠೇವಣಿದಾರರ ಕ್ಷೇತ್ರದಿಂದ ಚಂಜಿಮಲೆ ಬಿ.ರಮೇಶ್ ಅವಿರೋಧ ಆಯ್ಕೆಯಾಗಿದ್ದಾರೆ. ಈ ಮಧ್ಯೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಕುರಿತು ಚರ್ಚೆ ಮುನ್ನೆಲೆಗೆ ಬಂದಿದೆ.
ಮದ್ದೇರಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ರಮೇಶ್ ಶ್ರಮ ಅಪಾರ. ಕೋಲಾರದ ಪಿಎಲ್ಡಿ ಬ್ಯಾಂಕ್ ಅಧ್ಯರಾಗಿ, ಸಹಕಾರ ಸಂದ ಯೂನಿಯನ್ ನಿರ್ದೇಶಕರಾಗಿ ಅಪಾರ ಅನುಭವ ಹೊಂದಿರುವ ಅವರನ್ನು ಮದ್ದೇರಿ ಸಹಕಾರ ಸಂದ ಅಧ್ಯರನ್ನಾಗಿ ಮಾಡುವ ಮೂಲಕ ಕೋಲಾರ ಡಿಸಿಸಿ ಬ್ಯಾಂಕಿಗೆ ನಿರ್ದೇಶಕರನ್ನಾಗಿ ಆಯ್ಕೆ ಮಾಡಿ, ಬಳಿಕ ಅಧ್ಯ ಗಾದಿಗೇರಿಸುವ ಪ್ರಕ್ರಿಯೆ ಪಕ್ಷಮಟ್ಟದಲ್ಲಿ ಶುರುವಾಗಿದೆ ಎನ್ನಲಾಗಿದೆ. ಶಾಸಕ ಕೊತ್ತೂರು ಮಂಜುನಾಥ್ ಮತ್ತು ಎಂಎಲ್ಸಿ ಅನಿಲ್ಕುಮಾರ್ ಅವರ ಬೆಂಬಲಿಗರಾಗಿರುವ ರಮೇಶ್ಗೆ ಡಿಸಿಸಿ ಬ್ಯಾಂಕ್ ಅಧ್ಯ ಸ್ಥಾನ ಸಿಗಬಹುದೇ ಎಂಬುದನ್ನು ಕಾದು ನೋಡಬೇಕಿದೆ.
ವೆಂಕಟಾಚಲಪತಿ ಹೆಸರೂ ಮುನ್ನೆಲೆಗೆ
ಇನ್ನೊಂದೆಡೆ, ಸಾಲಗಾರರಲ್ಲದ ಕ್ಷೇತ್ರದಿಂದಗೆದ್ದಿರುವ ಕಾಂಗ್ರೆಸ್ ಮುಖಂಡ ಚೋಳಟ್ಟ ವೆಂಕಟಾಚಲಪತಿ ಕೂಡ ಪದಲ್ಲಿ ಪ್ರಭಾವಿ ನಾಯಕರಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಅವರ ಕೊಡುಗೆಯೂ ಇದೆ. ಈ ಕಾರಣದಿಂದ ಅವರ ಹೆಸರೂ ಚರ್ಚೆಯಲ್ಲಿದ್ದು ಕೊತ್ತೂರು ಮಂಜುನಾಥ ಮತ್ತು ಎಂಎಲ್ಸಿ ಅನಿಲ್ ಕುಮಾರ್ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದೆ.