ರಿಪ್ಪನ್‌ಪೇಟೆ: ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ ಕೃಷಿಯ ಚಿಗುರು ತಂಡದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಡಿ ಗವಟೂರು ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಗಣರಾಜ್ಯೋತ್ಸವದ ಅಂಗವಾಗಿ ಹಲವು ಸ್ಪರ್ಧೆಗಳನ್ನು ಆಯೋಜಿಸಿದ್ದರು.
ಭಾರತ ಪ್ರಜಾಪ್ರಭುತ್ವದ ತಾಯಿ ಮತ್ತು ವಿಕಸಿತ ಭಾರತ್ ಈ ವರ್ಷದ ಧ್ಯೇಯದಡಿ ಶಾಲೆಯ 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ನಮ್ಮ ಸಂವಿಧಾನ ವಿಷಯದಡಿ ಪ್ರಬಂಧ ಬರೆಯುವ ಸ್ಪರ್ಧೆ ಏರ್ಪಡಿಸಲಾಯಿತು. 4, 5ನೇ ತರಗತಿ ವಿದ್ಯಾರ್ಥಿಗಳಿಗೆ ರಾಷ್ಟಿçÃಯ ಚಿಹ್ನೆಗಳ ಜ್ಞಾಪಕ ಶಕ್ತಿ ಸ್ಪರ್ಧೆ, ರಾಜ್ಯ ಮತ್ತು ರಾಜಧಾನಿಗಳನ್ನು ಬರೆಯುವ ಸ್ಪರ್ಧೆ ಮತ್ತು ನಲಿಕಲಿ ಚಿಣ್ಣರಿಗೆ ರಾಷ್ಟçಧ್ವಜ ಬಿಡಿಸುವ ಸ್ಪರ್ಧೆ ನಡೆಸಲಾಯಿತು. ನಂತರ ಎಲ್ಲ ಮಕ್ಕಳಿಗೂ ದೇಶಭಕ್ತಿ ಗೀತೆ ಹಾಡುವ ಸ್ಪರ್ಧೆ ಮಾಡಿ ಅವರಲ್ಲಿ ಗಣರಾಜ್ಯೋತ್ಸವದ ಬಗ್ಗೆ ಜಾಗೃತಿ ಮೂಡಿಸಿದರು. ಶಿಕ್ಷಕಿಯರಾದ ಶಿರೋಮಣಿ, ಝಾನ್ಸಿರಾಣಿ ಇತರರಿದ್ದರು.