ಜಿಲ್ಲೆ

ಪರಿಹಾರ ನೀಡದ ಹಿನ್ನೆಲೆ; ಸಾರಿಗೆ ಸಂಸ್ಥೆ ಬಸ್ ಜಪ್ತಿ ಮಾಡಿದ ನ್ಯಾಯಾಲಯದ ಅಧಿಕಾರಿಗಳು

Haveri - Kariyappa Aralikatti

ರಾಣೆಬೆನ್ನೂರ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಇಲ್ಲಿಯ ಎನ್‌ಡ್ಲೂೃಕೆಎಸ್‌ಆರ್‌ಟಿಸಿ ಘಟಕದ ಬಸ್‌ನ್ನು ನ್ಯಾಯಾಲಯದ ಅಧಿಕಾರಿಗಳು ಶನಿವಾರ ಜಪ್ತಿ ಮಾಡಿದ್ದಾರೆ.
ಸಾರಿಗೆ ಘಟಕದ ಕೆಎ27ಎಫ್612 ಬಸ್ ಜಪ್ತಿ ಮಾಡಿರುವುದು.
2019ರಲ್ಲಿ ತಾಲೂಕಿನ ಕವಲೆತ್ತು ಬಳಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕೋಟೆಪ್ಪ ಕತ್ತಿ ಎಂಬುವರು ಮೃತಪಟ್ಟಿದ್ದರು. ಇದರಿಂದಾಗಿ ಈತನ ಪತ್ನಿ ಗೌರಮ್ಮನಿಗೆ 15,09,575 ರೂ. ಪರಿಹಾರ ನೀಡುವಂತೆ ಎನ್‌ಡ್ಲೂೃಕೆಎಸ್‌ಆರ್‌ಟಿಸಿ ಘಟಕಕ್ಕೆ ಸೂಚನೆ ನೀಡಿ ಸ್ಥಳೀಯ 3ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶರು ಆದೇಶಿಸಿದ್ದರು.
ಆದರೆ, ಎನ್‌ಡ್ಲೂೃಕೆಎಸ್‌ಆರ್‌ಟಿಸಿ ಘಟಕದವರು ಪರಿಹಾರ ನೀಡಿರಲಿಲ್ಲ. ಅದು ಬಡ್ಡಿ ಸಮೇತ ಇದೀಗ 20,59,040 ರೂ. ಆಗಿದೆ. ಆದ್ದರಿಂದ ನ್ಯಾಯಾಧೀಶರ ಆದೇಶದ ಮೇರೆಗೆ ಅಧಿಕಾರಿಗಳು ಸಾರಿಗೆ ಘಟಕದ ಬಸ್‌ನ್ನು ಜಪ್ತಿ ಮಾಡಿ ಕೋರ್ಟ್ ಆವರಣದಲ್ಲಿ ನಿಲ್ಲಿಸಿದ್ದಾರೆ.
ಅರ್ಜಿದಾರರ ಪರ ವಕೀಲರಾದ ಡಿ.ಕೆ. ಕಟಗಿ ಹಾಗೂ ಸಿ.ಎನ್. ಕಮ್ಮಾರ, ನ್ಯಾಯಾಲಯದ ಜಪ್ತಾಧಿಕಾರಿ ಕರಿಯಪ್ಪ ಗೌಡಪ್ಪಳವರ ಹಾಗೂ ಸಿಬ್ಬಂದಿ ಇದ್ದರು.