ವಿಜಯಪುರ : ಕರ್ತವ್ಯದ ವೇಳೆ ವಿದ್ಯುತ್ ಅಪಘಾತದಲ್ಲಿ ಮೃತಪಟ್ಟ ಲೈನ್ಮೆನ್ ಸುರೇಶ ಗೆಣ್ಣೂರ ಅವರ ಕುಟುಂಬಕ್ಕೆ ಹೆಸ್ಕಾಂ ಅಧ್ಯ ಸೈಯದ್ ಅಜೀಮ್ಪೀರ್ ಖಾದ್ರಿ ಪರಿಹಾರದ ಚೆಕ್ನ್ನು ನೀಡಿದರು. ಸುರೇಶ್ ಬಸವನಬಾಗೇವಾಡಿ ಹೆಸ್ಕಾಂ ವಿಭಾಗದಲ್ಲಿ ಲೈನ್ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು 2024 ಮಾ. 31 ರಂದು ವಿದ್ಯುತ್ ಅಪಘಾತದಲ್ಲಿ ಮರಣ ಹೊಂದಿದ್ದರು.
ಈ ಹಿನ್ನೆಲೆ ಅವರ ಕುಟುಂಬಕ್ಕೆ ಹೆಸ್ಕಾಂ ವತಿಯಿಂದ ನೀಡಲಾಗುವ ಎಫ್ಬಿಎಫ್ ಹಣ 2 ಲ ಹಾಗೂ ಮರಣ ಉಪದಾನ ಮೊತ್ತ 12,53,700 ರೂ. ಗಳ ಚೆಕ್ನ್ನು ಮೃತರ ಪತ್ನಿ ರೇಣುಕಾ ಅವರಿಗೆ ಶುಕ್ರವಾರ ಹಸ್ತಾಂತರಿಸಿದರು. ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ವೈಶಾಲಿ ಎಂ.ಎಲ್., ಅಧೀಕ ಇಂಜನಿಯರ್ ಸಿದ್ದಪ್ಪ ಬಿಂಜಗೇರಿ, ಹೆಸ್ಕಾಂ ಉಪ ಲೆಕ್ಕ ನಿಯಂತ್ರಣಾಧಿಕಾರಿ ಬಿ.ಕೆ. ಉಳ್ಳಾಗಡ್ಡಿ ಮತ್ತಿತರರಿದ್ದರು.
ಕರ್ತವ್ಯದ ವೇಳೆ ಮೃತ ಪಟ್ಟ ಲೈನ್ಮೆನ್ ಸುರೇಶ ಗೆಣ್ಣೂರ ಕುಟುಂಬಕ್ಕೆ ಹೆಸ್ಕಾಂ ಅಧ್ಯ ಸೈಯದ್ ಅಜೀಮ್ಪೀರ್ ಖಾದ್ರಿ ಪರಿಹಾರದ ಚೆಕ್ನ್ನು ನೀಡಿದರು.