ಜಿಲ್ಲೆ

ಮದ್ಯ ಸೇವನೆಗೆ ಸ್ನೇಹಿತರ ಒತ್ತಾಯ, ಮನನೊಂದು ಯುವಕ ಆತ್ಮಹತ್ಯೆ

ಮುಂಡರಗಿ: ಸ್ನೇಹಿತರ ಕಿರುಕುಳಕ್ಕೆ ಬೇಸತ್ತು ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹೆಸರೂರು ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.

ಹೆಸರೂರು ಗ್ರಾಮದ ಬಸವರಾಜ ಕೊಟ್ರಪ್ಪ ಕರಡಕಲ್ಲ(29) ಆತ್ಮಹತ್ಯೆ ಮಾಡಿಕೊಂಡ ಯುವಕ. ಬಸವರಾಜ ಸೌಮ್ಯ ಸ್ವಭಾವದವನಾಗಿದ್ದು, ಅವನ ಸ್ನೇಹಿತರಾದ ಚೇತನ ಮೌನೇಶ ಬಡಿಗೇರ ಹಾಗೂ ವೀರೇಶ ಆಶಾಪುರ ಅವರು ಬಸವರಾಜಗೆ ಮದ್ಯಪಾನ ಮಾಡುವಂತೆ ಒತ್ತಾಯಿಸುತ್ತಿದ್ದರು. ಇದಕ್ಕೆ ನಿರಾಕರಿಸಿದಾಗ ಸ್ನೇಹಿತರು ಬೆದರಿಸಿ, ಹೀಯಾಳಿಸುತ್ತಿದ್ದರು.

ಇದರಿಂದ ಮನನೊಂದು ಬಸವರಾಜ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಬಸವರಾಜ ಪತ್ರ ಬರೆದಿಟ್ಟಿದ್ದಾನೆ. ಬಸವರಾಜ ತಾಯಿ ಗಿರಿಜವ್ವ ಕೊಟ್ರಪ್ಪ ಕರಡಕಲ್ಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.