ಬೈಲಹೊಂಗಲ: ಪಟ್ಟಣದ ಹೊಸೂರ ರಸ್ತೆಯ ವಿಜಯ ಸೋಷಿಯಲ್ ಕ್ಲಬ್‌ನಲ್ಲಿ ಭಾನುವಾರ 125ನೇ ವಸಂತೋತ್ಸವದ ಅಂಗವಾಗಿ ಸ್ಮರಣಭವನ ಹಾಗೂ ದಿ.ಶಿವಲಿಂಗಪ್ಪ ಚಿನ್ನಪ್ಪ ಮೆಟಗುಡ್ಡ ಅವರ ಸ್ಮರಣಾರ್ಥ ಸಮುದಾಯ ಭವನದ ಉದ್ಘಾಟನೆ ಸಮಾರಂಭ ಜರುಗಿತು.
ವಿಜಯ ಸೋಶಿಯಲ್ ಕ್ಲಬ್ ಅಧ್ಯಕ್ಷ ಬಿ.ಎಸ್.ಕಿವಡಸನ್ನವರ ಮಾತನಾಡಿ, ಸಾರ್ವಜನಿಕರಿಗೆ ಅನುಕೂಲವಾಗಲು ಕ್ಲಬ್‌ಗೆ 60 ಗುಂಟೆ ಭೂಮಿ ದಾನ ನೀಡಿದ ಶಿವಲಿಂಗಪ್ಪ ಚಿನಪ್ಪ ಮೆಟಗುಡ್ಡ ಸ್ಮರಣಾರ್ಥ ಈ ಭವನ ನಿರ್ಮಿಸಲಾಗಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕ್ಲಬ್ ಉಪಾಧ್ಯಕ್ಷ ಎಸ್.ಸಿ.ಮೆಟಗುಡ್ಡ, ಕಾರ್ಯದರ್ಶಿ ರಾಜಶೇಖರ ಮೆಟಗುಡ್ಡ, ಜಂಟಿ ಕಾರ್ಯದರ್ಶಿ ಎಸ್.ಜಿ.ಸಂಪಗಾಂವ, ನಿರ್ದೇಶಕರಾದ ಎಸ್.ಎಫ್.ಹರಕುಣಿ, ಬಸವರಾಜ ತಟವಾಟಿ, ಜಿ.ಬಿ.ಶಿಗಿಹಳ್ಳಿ, ಎನ್.ಬಿ.ಹೊಸಕೋಟಿ, ಎಂ.ವೈ.ಸೋಮಣ್ಣವರ, ಎಸ್.ಆರ್.ಅಂಗಡಿ, ಶ್ರೀಧರ ಲೋಕೂರ, ಸುನೀಲ ಪಾಟೀಲ ಮತ್ತಿತರರು ಇದ್ದರು.