ನರಗುಂದ: ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ನೂತನ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಗುರ್ಲಕಟ್ಟಿ ಗ್ರಾಮದ ಶಿವಪ್ಪ ಭೀಮಪ್ಪ ದೊಡಮನಿ ಅವರನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾಜ ಬಾಂಧವರು, ಸಂಘದ ಪದಾಧಿಕಾರಿಗಳು ಮಂಗಳವಾರ ಸನ್ಮಾನಿಸಿದರು.
ಶಿವಪ್ಪ ದೊಡಮನಿ ಮಾತನಾಡಿ, ನರಗುಂದ ಸರಸ್ವತಿ ನಗರ ಬಡಾವಣೆಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶ್ರೀಮಹರ್ಷಿ ವಾಲ್ಮೀಕಿ ಸಮುದಾಯ ಭವನ ಕಾಮಗಾರಿ 2 ವರ್ಷಗಳಿಂದ ಅರ್ಧಕ್ಕೆ ನಿಂತಿದೆ. ಕೇವಲ 1 ಕೋಟಿ ರೂ. ಮೊತ್ತದ ಕಾಮಗಾರಿ ಮಾತ್ರ ಮಾಡಲಾಗಿದೆ. ಇನ್ನುಳಿದ 2 ಕೋಟಿ ರೂ. ವೆಚ್ಚದ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕ ಸಿ.ಸಿ.ಪಾಟೀಲ ಹಾಗೂ ರಾಜ್ಯ ಸರ್ಕಾರಕ್ಕೆ ವಾಲ್ಮೀಕಿ ಸಮಾಜದಿಂದ ಒತ್ತಾಯಿಸಲಾಗುತ್ತದೆ.
ಪಟ್ಟಣದ ಅಳಗವಾಡಿ ರಸ್ತೆ ಬಳಿ ಸಿಂಧೂರ ಲಕ್ಷ್ಮಣ ವೃತ್ತ ನಿರ್ಮಾಣ ಕಾಮಗಾರಿಯೂ ಆಮೆಗತಿಯಲ್ಲಿ ಸಾಗಿದೆ. ವಾಲ್ಮೀಕಿ ಸಮಾಜ ಭಾಂಧವರು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದೆ. ಈ ಬಗ್ಗೆ ಎಲ್ಲರೂ ಸಂಘಟನಾತ್ಮಕವಾಗಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿ, ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ವಾಲ್ಮೀಕಿ ಸಮಾಜದ ಸಲಹಾ ಸಮಿತಿ ಸದಸ್ಯರಾದ ಜಿ.ಬಿ.ತಳವಾರ, ಯಲ್ಲಪ್ಪ ನಾಯ್ಕರ, ಭೀಮಪ್ಪ ತಳವಾರ, ಐ.ವೈ. ಮಣ್ಣೂರ, ಕೃಷ್ಣಪ್ಪ ದೊಡಮನಿ, ವೀರಣ್ಣ ಬೆನಕೊಪ್ಪ, ಸಮಾಜದ ತಾಲೂಕು ಉಪಾಧ್ಯಕ್ಷ ಯಲ್ಲಪ್ಪ ಪೂಜಾರ, ಕಾರ್ಯದರ್ಶಿ ಆನಂದ ಮಲ್ಲಸಮುದ್ರ, ಸಹ ಕಾರ್ಯದರ್ಶಿ ಮಲ್ಲಪ್ಪ ಅಬ್ಬಿಗೇರಿ, ಖಜಾಂಚಿ ಉಮೇಶ ತಳವಾರ, ಆಡಳಿತ ಮಂಡಳಿ ಸದಸ್ಯರಾದ ಸಿದ್ದಪ್ಪ ತಳವಾರ,
ಸಿದ್ದಪ್ಪ ದೊಡಮನಿ, ಮಂಜುನಾಥ ತಳವಾರ, ರವಿ ತಳವಾರ, ಬಸವರಾಜ ತಳವಾರ, ಮಾರುತಿ ತಳವಾರ, ಪುಂಡಲೀಕಪ್ಪ ವಾಲ್ಮೀಕಿ, ತುಳಸಿಗೇರಿ ಪೂಜಾರ, ಬಸಪ್ಪ ತಳವಾರ, ತುಕಾರಾಮ ಬೇಡಗೌಡ್ರ, ಸಮಾಜದ ಮುಖಂಡರಾದ ಬಸಪ್ಪ ತಳವಾರ, ನಾಗಪ್ಪ ಗೋರಾಬಾಳ, ಫಕೀರಪ್ಪ ತಳವಾರ, ಇತರರಿದ್ದರು. ಪುಂಡಲೀಕ ವಾಲ್ಮೀಕಿ ಸ್ವಾಗತಿಸಿದರು. ಈರಪ್ಪ ಬೆನಕೊಪ್ಪ ನಿರೂಪಿಸಿದರು, ಸಿದ್ಧಪ್ಪ ತಳವಾರ ವಂದಿಸಿದರು.