ಮಹಾಲಿಂಗಪುರ: ಸಮಾಜದ ಹಿತಕ್ಕಾಗಿ ನಾವೆಲ್ಲ ವಿಶೇಷ ಒತ್ತು ನೀಡಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಿ ಸಮಾಜದ ಬೆಳವಣಿಗೆಗೆ ಶ್ರಮಿಸಬೇಕು. ಮಹಸಭಾ ಉದ್ದೇಶವು ಇದೇ ಆಗಿದೆ ಎಂದು ಕರ್ನಾಟಕ ರಾಜ್ಯ ಆರ್ಯವೈಶ್ಯ ಮಹಾಸಭಾ ರಾಜ್ಯಾಧ್ಯಕ್ಷ ಆರ್.ಪಿ.ರವಿಶಂಕರ ಹೇಳಿದರು.
ಇಲ್ಲಿನ ವಾಸವಿ ಮಂದಿರದಲ್ಲಿ ಈಚೆಗೆ ಜರುಗಿದ ಮಹಾಸಭಾ ಯೋಜನೆಗಳು ಮತ್ತು ವಿಭಾಗದ ಕಾರ್ಯಚಟುವಟಿಕೆಗಳ ಸಭೆಯಲ್ಲಿ ಮಾತನಾಡಿದ ಅವರು, ಶತ-ಶತಮಾನಗಳಿಂದ ರಾಜ್ಯದ ಅಭಿವೃದ್ಧಿಯಲ್ಲಿ ಅತೀ ಸಂಯಮದಿಂದ ತನು,ಮನ, ಧನದ ಸೇವೆ ಸಲ್ಲಿಸುತ್ತಾ ಬಂದಿರುವ ಆರ್ಯವೈಶ್ಯರು ತ್ಯಾಗ, ಒಳ್ಳೆಯತನ ಸಹಾಯ ಮಾಡುವ ಸದ್ಗುಣವಂತರು. ಸಾರ್ವಜನಿಕ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿ ನಿಂತು ನಾಡು ನುಡಿ ಸೇವೆ ಸಲ್ಲಿಸುತ್ತಾ ಬಂದಿದೆ ಎಂದರು.
ಅಮರ ಜ್ಯೋತಿ ಯೋಜನೆ, ಯುಪಿಎಸ್‌ಸಿ ಪರೀಕ್ಷೆಗಳಿಗೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಮತ್ತು ಉಚಿತ ಲ್ಯಾಪಟಾಪ ವಿತರಣೆ, ವಿದ್ಯಾನಿಧಿ ಯೋಜನೆ, ಬಡ್ಡಿ ರಹಿತ ಸಾಲ, ಸಂಧ್ಯಾಶ್ರೀ ಸೇರಿದಂತೆ ಅನೇಕ ಯೋಜನೆಗಳನ್ನು ಮಹಾಸಭಾ ಜಾರಿಗೊಳಿಸಿದೆ ಎಂದು ತಿಳಿಸಿದರು.
ಆರ್ಯವೈಶ್ಯ ಸಮಾಜದ ಮಹಾಲಿಂಗಪುರದ ಘಟಕದ ಅಧ್ಯಕ್ಷ ರಾಘವೇಂದ್ರ ಪ್ರಸಾದ ಗುಂಡಾ, ಮಹಾಸಭಾದ ನಿರ್ದೇಶಕ ಪ್ರಶಾಂತ ಗುತ್ತಲ, ಕೆ.ಜೆ.ಹನುಮಂತಯ್ಯ, ಸಚಿನ ಗುಂಡಾ, ಪ್ರಧಾನ ಕಾರ್ಯದರ್ಶಿ ಎಚ್.ಜಿ.ಹನುಮಂತಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಸ್ಮಿತಾ ಗುಂಡಾ, ಮುಖಂಡರಾದ ವಿ.ಎನ್.ಗುಂಡಾ, ಸತ್ಯಾನಾರಯಣ ಹೇಮಾದ್ರಿ, ರವಿ ದಂತಿ, ರೂಪಾ ದಂತಿ, ಸುಮಂಗಲಾ ಗುಂಡಾ, ಸುರೇಖಾ ಗುಂಡಾ ಉಪಸ್ಥಿತರಿದ್ದರು. ಪ್ರಶಾಂತ ಗುತ್ತಲ ನಿರೂಪಿಸಿದರು. ಶ್ರೀಪಾದ ಗುಂಡಾ ಸ್ವಾಗತಿಸಿದರು. ಡಾ. ವಿಶ್ವನಾಥ ಗುಂಡಾ ವಂದಿಸಿದರು.