ಬೈಂದೂರು ಉತ್ಸವದ ಸಮಾರೋಪದಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರನ್ನು ಉತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಶಾಸಕ ಹರೀಶ ಪೂಂಜ, ಕೃಷ್ಣಪ್ರಸಾದ ಅಡ್ಯಂತಾಯ, ಮಾಜಿ ಸದಸ್ಯ ಜಯಾನಂದ ಹೋಬಳಿದಾರ್, ಬಾಲಚಂದ್ರ ಭಟ್, ಶಿರೂರು ಅಸೋಸಿಯೇಷನ್ ಸ್ಥಾಪಕಾಧ್ಯಕ್ಷ ಸಾಧನ್‌ದಾಸ್ ಇತರರು ಇದ್ದರು 
ಜಿಲ್ಲೆ

ಉತ್ಸವಗಳಿಂದ ಸಮಾಜ ಜೋಡಿಸುವ ಕಾರ್ಯ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬೈಂದೂರು

ಉತ್ಸವಗಳಿಂದ ಸಮಾಜ ಜೋಡಿಸುವ ಕಾರ್ಯವಾಗಬೇಕು. ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳ ಚೌಕಟ್ಟಿನಲ್ಲಿ ಎಲ್ಲರೂ ಒಂದಾಗಿ ಬೆರೆತು ನಮ್ಮೊಳಗಿನ ಬಾಂಧವ್ಯ ಗಟ್ಟಿಗೊಳಿಸುವ ಸದುದ್ದೇಶಗಳು ಕೂಡ ಉತ್ಸವಾಚರಣೆಯ ಭಾಗವಾಗಿರಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸಮೃದ್ಧ ಬೈಂದೂರು ಆಯೋಜನೆಯ ಮೂರು ದಿನಗಳ ಬೈಂದೂರು ಉತ್ಸವ-2024ರ ಸಮಾರೋಪದಲ್ಲಿ ಮಾತನಾಡಿದರು.

ಒಂದು ಕ್ಷೇತ್ರದ ಪ್ರಗತಿ ಎನ್ನುವುದು ಕೇವಲ ಅಲ್ಲಿನ ಅಭಿವೃದ್ಧಿ ಕಾರ್ಯ, ರಾಜಕೀಯ ಚಟುವಟಿಕೆಯಿಂದ ಮಾತ್ರ ಗುರುತಿಸುವುದಲ್ಲ. ಬದಲಾಗಿ ಜನರ ಅಭಿಲಾಷೆಗಳಿಗೆ ಪೂರಕವಾದ ವಾತಾವರಣ ನಿರ್ಮಿಸುವುದು ಜನಸಾಮಾನ್ಯರ ಕರ್ತವ್ಯ. ಬೈಂದೂರು ಉತ್ಸವದ ಮೂಲಕ ಹೊಸ ಪರಿಕಲ್ಪನೆಯ ಅನಾವರಣವಾಗಿದೆ. ಈ ಮೂಲಕ ಬೈಂದೂರು ಇನ್ನಷ್ಟು ಹೊಸತನಕ್ಕೆ ತೆರೆದುಕೊಂಡಿದೆ ಎಂದರು.

ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ನಿರ್ದೇಶಕ ರವಿ ಬಸ್ರೂರು ಅವರನ್ನು ಸನ್ಮಾನಿಸಲಾಯಿತು.

ಶಾಸಕ ಹರೀಶ ಪೂಂಜ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ, ಮಾಜಿ ಸದಸ್ಯ ಜಯಾನಂದ ಹೋಬಳಿದಾರ್, ಹಟ್ಟಿಯಂಗಡಿ ದೇವಳದ ಆಡಳಿತ ಮೊಕ್ತೇಸರ ಬಾಲಚಂದ್ರ ಭಟ್, ಶಿರೂರು ಅಸೋಸಿಯೇಷನ್ ಸ್ಥಾಪಕಾಧ್ಯಕ್ಷ ಸಾಧನ್‌ದಾಸ್, ಉದ್ಯಮಿಗಳಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ಗಾಯಾಡಿ ಗೋಕುಲ ಶೆಟ್ಟಿ, ಕುಂಜಾಲು ವೆಂಕಟೇಶ ಕಿಣಿ, ಡಿ.ಗೋಪಾಲಕೃಷ್ಣ ಕಾಮತ್, ಸತೀಶ ಕೊಠಾರಿ, ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ, ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್., ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಶಿವಾನಂದ ಶೆಟ್ಟಿ, ಡಾ.ಗಣೇಶ ಗಂಗೊಳ್ಳಿ, ರಾಮಚಂದ್ರ ಶಿರೂರಕರ್, ಗೌರಿ ದೇವಾಡಿಗ, ಸದಾನಂದ ಉಪ್ಪಿನಕುದ್ರು, ಉಮೇಶ ಶೆಟ್ಟಿ ಕಲ್ಗದ್ದೆ, ಉತ್ಸವದ ಸಹ ಸಂಚಾಲಕ ಶ್ರೀಗಣೇಶ ಉಪ್ಪುಂದ ಮೊದಲಾದವರು ಇದ್ದರು. ಸಮೃದ್ಧ ಜನಸೇವ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ ಸ್ವಾಗತಿಸಿದರು. ಆರ್‌ಜೆ ಪ್ರಸನ್ನ ನಿರೂಪಿಸಿದರು. ಪ್ರದೀಪ ಶೆಟ್ಟಿ ಕಾರಿಕಟ್ಟೆ ವಂದಿಸಿದರು.

ಬೈಂದೂರು ಅಭಿವೃದ್ಧಿ ಬಗ್ಗೆ ಕನಸು ಕಂಡ ಹಲವು ಮನಸ್ಸುಗಳಿವೆ. ಅವರೆಲ್ಲರನ್ನೂ ಉತ್ಸವದ ಮೂಲಕ ಒಂದಾಗಿಸಿ ಊರಿನ ಪ್ರಗತಿಯ ಬಗ್ಗೆ ಯೋಜಿಸುವ ಕಾರ್ಯವಾಗಿದೆ. ರಾಜ್ಯೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಅದ್ದೂರಿ ಉತ್ಸವ ಸಂಘಟಿಸುವ ಮೂಲಕ ನಿರೀಕ್ಷೆಗೂ ಮೀರಿ ಯಶಸ್ಸು ಸಿಕ್ಕಿದೆ. ಬೈಂದೂರು ಉತ್ಸವ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡು ಜಾಗತಿಕ ಮಟ್ಟದಲ್ಲಿ ಬೈಂದೂರಿನ ಹಿರಿಮೆ ಹೆಚ್ಚಿಸಿದೆ. ಉತ್ಸವಕ್ಕೆ ಆಗಮಿಸಿದ ಲಕ್ಷಾಂತರ ಜನಸಮೂಹ ನೋಡಿದಾಗ ಅದ್ಭುತ ಯಶಸ್ಸಿಗೆ ಸಂತೃಪ್ತಿಯಾಗಿದೆ. -ಗುರುರಾಜ ಗಂಟಿಹೊಳೆ ಶಾಸಕ https://www.vijayavani.net/congress-culture-of-insulting-pm https://www.vijayavani.net/request-for-completion-of-port-works