filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 36; 
ಜಿಲ್ಲೆ

ಸಮುದಾಯ ಇಬ್ಭಾಗ ಮಾಡುವ ಹುನ್ನಾರ

ಮಳವಳ್ಳಿ: ಸಮುದಾಯವನ್ನು ಒಡೆದು ಆಳುವವರಿಗೆ ಅವಕಾಶ ಕೊಡದೆ ಒಗ್ಗಟ್ಟಿನಿಂದ ವೀರಶೈವ ಸಮಾಜವನ್ನು ಸಂಘಟಿಸಬೇಕಿದೆ ಎಂದು ವಕೀಲ ಆರ್.ಎಂ.ಚಂದ್ರಶೇಖರ್ ತಿಳಿಸಿದರು.


ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆಯಲ್ಲಿ ಜಿಲ್ಲಾ ಮತ್ತು ತಾಲೂಕು ಘಟಕಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ತಾಲೂಕಿನ ಸರಗೂರು ಸಮೀಪದ ಹೊಸಮಠದಲ್ಲಿ ಮಂಗಳವಾರ ಸಮುದಾಯದ ಮುಖಂಡರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಕೆಲ ಪಟ್ಟಭದ್ರ ಹಿತಾಶಕ್ತಿಗಳು ವೀರಶೈವ-ಲಿಂಗಾಯತ ಪದವನ್ನು ಪ್ರತ್ಯೇಕ ಮಾಡಿಕೊಂಡು ನಮ್ಮಲ್ಲೇ ಒಳಪಂಗಡದ ವಿಷಬೀಜ ಬಿತ್ತಿ ಸಮುದಾಯವನ್ನೇ ಇಬ್ಭಾಗ ಮಾಡುವ ಹುನ್ನಾರ ಮಾಡುತ್ತಿದ್ದಾರೆ. ಇದಕ್ಕೆ ಆಸ್ಪದ ಕೊಡದೆ ಮುಂದಿನ ದಿನಗಳಲ್ಲಿ ಸಮಾಜದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕಾದ ಹೊಣೆಗಾರಿಕೆ ಆಡಳಿತ ಮಂಡಳಿ ಮೇಲಿದೆ ಎಂದರು.


ತಾಲೂಕು ಸಮಿತಿಯನ್ನು ಎಲ್ಲರ ಸಹಕಾರದಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಪಟ್ಟಣದಲ್ಲಿ ಶಿವರಾತ್ರೀಶ್ವರ ಜಯಂತ್ಯುತ್ಸವನ್ನು ಆಚರಿಸಲು ಮೂರು ವರ್ಷಗಳಿಂದ ಪ್ರಯತ್ನ ನಡೆಸುತ್ತಿದ್ದರೂ ಅನಿವಾರ್ಯ ಕಾರಣಗಳಿಂದ ಮುಂದೂಡಲ್ಪಟ್ಟಿದೆ. ಈ ಬಾರಿಯಾದರೂ ಆಚರಿಸಲು ಮುಂದಾಗೋಣ ಎಂದು ಮನವಿ ಮಾಡಿದರು.


ಎಂ.ಎಲ್.ಹುಂಡಿ ಗೌರಿಶಂಕರ ಸ್ವಾಮೀಜಿ, ಹೊಸಮಠ ಬಸವರಾಜೇಂದ್ರ ಸ್ವಾಮೀಜಿ, ದೊಡ್ಡ ಬೂಹಳ್ಳಿ ಶಿವಪ್ಪ ಸ್ವಾಮೀಜಿ, ಹಂಗ್ರಾಪುರ ಬಸವ ರಾಜೇಂದ್ರ ಸ್ವಾಮೀಜಿ, ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೃಷಭೇಂದ್ರಪ್ಪ, ಉಪಾಧ್ಯಕ್ಷ ಜಗದೀಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಿವಮಲ್ಲಪ್ಪ, ತಾಲೂಕು ಯುವ ಬಳಗದ ಅಧ್ಯಕ್ಷ ಎಚ್.ಸಿ.ಮಹೇಶ್, ಬಸವಕೇಂದ್ರ ಅಧ್ಯಕ್ಷ ತೊಟ್ಟಿಮನೆ ಚನ್ನಪ್ಪ, ವೀರಶೈವ ಮುಖಂಡರಾದ ವಿಶ್ವಾಸ್, ರಾಜು ಮಾಗನೂರು, ಸಿಎಂ.ಪುಟ್ಟಬುದ್ದಿ, ಹೆಬ್ಬಣಿ ಬಸವರಾಜು, ಹಂಗ್ರಾಪುರ ಪ್ರಭು, ಬಬ್ರುವಾಹನ, ಸುರೇಶ್, ಅಶೋಕ್ ಇದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಆನಂದ, ತಾಲೂಕು ಅಧ್ಯಕ್ಷ ಮೂರ್ತಿ, ಜಿಲ್ಲೆ ಮತ್ತು ತಾಲೂಕು ಸಮಿತಿಗೆ ಆಯ್ಕೆಯಾಗಿರುವ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.