ವಿಜಯವಾಣಿ ಸುದ್ದಿಜಾಲ ಉಳ್ಳಾಲ ಅದ್ದೂರಿಯಾಗಿ ಮದುವೆ ಇತರ ಕಾರ್ಯಕ್ರಮಗಳು ನಡೆಸಿದರೆ ಸಮುದಾಯ ಅಭಿವೃದ್ಧಿ ಆಗದು. ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿಗೊಂಡರೆ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಹೇಳಿದರು. ಅಖಿಲ ಭಾರತ ಬ್ಯಾರಿ ಮಹಾಸಭಾ ವತಿಯಿಂದ ಜನವರಿ 8ರಂದು ನಡೆಯಲಿರುವ ‘ಬ್ಯಾರಿ ಪ್ರತಿನಿಧಿಗಳ ಜಿಲ್ಲಾ ಸವಾವೇಶ’ದ ಕರಪತ್ರವನ್ನು ಉಳ್ಳಾಲ ದರ್ಗಾ ವಠಾರದಲ್ಲಿ ಬಿಡುಗಡೆಗೊಳಿಸಿ ವಾತನಾಡಿದರು. ಮುಖಂಡ ಹೈದರ್ ಪರ್ತಿಪ್ಪಾಡಿ ವಾತನಾಡಿ, ಸಮುದಾಯದ ಬಗ್ಗೆ ಚಿಂತನೆ ವಾಡುವ ಜನರು, ಸಂಟನೆಗಳ ಅಗತ್ಯವಿದೆ ಎಂದರು. ಮಂಗಳೂರು ತಾಲೂಕು ಪಂಚಾಯಿತಿ ವಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಉಳ್ಳಾಲ ನಗರಸಭಾ ಸದಸ್ಯ ಜಬ್ಬಾರ್ ಉಳ್ಳಾಲ್, ವಾಜಿ ಸದಸ್ಯ ಉಸ್ಮಾನ್ ಕಲ್ಲಾಪು, ಪ್ರಮುಖರಾದ ಜಲೀಲ್ ಕೃಷ್ಣಾಪುರ, ಅಬ್ಬಾಸ್ ಅಲಿ ಬಂಟ್ವಾಳ್, ಮುಸ್ತಫಾ ಅಬ್ದುಲ್ಲಾ, ಮನ್ಸೂರ್ ಮಂಚಿಲ, ವಕೀಲ ಹನೀಫ್, ಶಾಕೀರ್, ಹುಸೈನ್ ಕೂಳೂರು, ಹನೀಫ್ ಬೆಂಗರೆ, ಇಬ್ರಾಹಿಂ ಕೆ.ಸಿ.ನಗರ, ರಶೀದ್ ಉಳ್ಳಾಲ, ಅಹ್ಮದ್ ಬಾವಾ ಬಜಾಲ್, ಅಶ್ರಫ್ ಬದ್ರಿಯಾ ಮೊದಲಾದವರು ಉಪಸ್ಥಿತರಿದ್ದರು. ಅಖಿಲ ಭಾರತ ಬ್ಯಾರಿ ಮಹಾಸಭಾ ಅಝೀಝ್ ಬೈಕಂಪಾಡಿ ಪ್ರಾಸ್ತಾವಿಕ ವಾತನಾಡಿದರು. ರಹ್ಮಾನ್ ಕೋಡಿಜಾಲ್ ವಂದಿಸಿದರು. ಹಮೀದ್ ಕಿನ್ಯ ಕಾರ್ಯಕ್ರಮ ನಿರೂಪಿಸಿದರು.
ಸಮುದಾಯಕ್ಕೆ ಶಾಸಕ, ಸಂಸದನಿಗಿಂತ ಐಎಎಸ್, ಐಪಿಎಸ್ ಅಧಿಕಾರಿಗಳ ಅವಶ್ಯಕತೆಯಿದೆ. ಜಾಟ್ ಸಮುದಾಯದಿಂದ ಪ್ರತಿವರ್ಷ ಹತ್ತು ಮಂದಿ ಐಎಎಸ್, ಐಪಿಎಸ್ ಆಗುತ್ತಿದ್ದು ಇದರಿಂದಾಗಿ ಸಮುದಾಯ ಅಭಿವೃದ್ಧಿ ಹೊಂದಿದೆ. ಈ ನಿಟ್ಟಿನಲ್ಲಿ ನಡೆಯುವ ಸವಾವೇಶಕ್ಕೆ ಪ್ರತಿ ಜವಾಅತಿನ ಎಲ್ಲರ ಸಹಕಾರ ಅಗತ್ಯ. ಅಝೀಝ್ ಬೈಕಂಪಾಡಿ, ಅಧ್ಯಕ್ಷರು, ಅಖಿಲ ಭಾರತ ಬ್ಯಾರಿ ಮಹಾಸಭಾ https://www.vijayavani.net/primary-education-is-the-stepping-stone-to-the-future https://www.vijayavani.net/mangalore-sc-st-meeting-at-police-comissioner-office-2